ಹುಬ್ಬಳ್ಳಿ: ಕಣ್ಣಿಗೆ ಖಾರದ ಪುಡಿ ಎರಚಿ ಓರ್ವನನ್ನು ಕೊಲೆ ಮಾಡಿದ ಪ್ರಕರಣದಲ್ಲಿ ನಾಲ್ವರನ್ನು ಬೆಂಡಿಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಡಿ.೨೭ ರಂದು ಹುಬ್ಬಳ್ಳಿಯ ಮಂಟೂರ ರಸ್ತೆ ನಿವಾಸಿಯಾದ ಸ್ಯಾಮುಯಲ್ ಮಬ್ಬು ಎಂಬಾತನನ್ನು ಕೊಲೆ ಮಾಡಿ, ಆರೋಪಿಗಳು ಪರಾರಿಯಾಗಿದ್ದು, ಈ ಕುರಿತು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸುಲೇಮಾನ್ ಬಳ್ಳಾರಿ, ಟೈಟಾಸ್ ಬಾಬು ವೆನ್ನಮ್ಮ, ಮಹ್ಮದಷಾ ಫಿರೋಜಾಬಾದ , ಮೌಲಾಸಾಬ್ ರಮಜಾನವರಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.
ಕೊಲೆಗೆ ಹಣಕಾಸಿನ ವ್ಯವಹಾರ ಮತ್ತು ಕೌಟುಂಬಿಕ ಕಲಹದ ವಿಷಯವಾಗಿ ಕೊಲೆ ನಡೆದಿರುವ ಬಗ್ಗೆ ವಿಚಾರಣೆ ವೇಳೆ ತಿಳಿದುಬಂದಿದ್ದು, ತನಿಖೆ ಮುಂದುವರಿಸಲಾಗಿದೆ.