ಕ್ಷುಲ್ಲಕ ಕಾರಣ: ಸ್ಟೀಲ್ ಚಮಚ, ಇಟ್ಟಿಗೆಗಳಿಂದ ಹಲ್ಲೆ

0
11

ಹುಬ್ಬಳ್ಳಿ: ಕ್ಷುಲಕ ಕಾರಣಕ್ಕೆ ಮೂರ‍್ನಾಲ್ಕು ಜನ ಸೇರಿ ಓರ್ವನಿಗೆ ಹಲ್ಲೆ ಮಾಡಿದ್ದಲ್ಲದೆ, ಸ್ಟೀಲ್ ಚಮಚದಿಂದ ತಲೆ ಮತ್ತು ಕುತ್ತಿಗಿಗೆ ಹೊಡೆದಿರುವ ಘಟನೆ ದುರ್ಗದ ಬಯಲಿನಲ್ಲಿ ರವಿವಾರ ರಾತ್ರಿ ನಡೆದಿದ್ದು, ಓರ್ವ ಗಾಯಗೊಂಡಿದ್ದಾನೆ.
ನಗರದ ಶಿವಾನಂದ ಭಜಂತ್ರಿ ಗಾಯಗೊಂಡಿದ್ದಾನೆ. ರೋಹಿತ್ ಬಿಜವಾಡ, ಮಲ್ಲು ಎಂಬುವರು ಸೇರಿದಂತೆ ನಾಲ್ವರು ಹಲ್ಲೆ ಮಾಡಿದ್ದಾರೆ.
ಇಡ್ಲಿವಡಾ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿರುವ ಶಿವಾನಂದನಿಗೆ ಗೋಬಿ ಅಂಗಡಿಯ ಹತ್ತಿರ ನಿಂತುಕೊಂಡಾಗ ಆರೋಪಿತರು ಡಿಕ್ಕಿ ಹೊಡೆದು, ನನಗೆ ಎದುರು ಮಾತನಾಡುತ್ತೀಯಾ? ಎಂದು ಇಟ್ಟಿಗೆ ತುಂಡುಗಳಿಂದ ಹೊಡೆದಿದ್ದಾರೆ. ಅದರಿಂದ ತಪ್ಪಿಸಿಕೊಂಡು ಓಡಿಹೋದರೂ ಬಿಡದೆ ಬೆನ್ನಟ್ಟಿ ಫಾಸ್ಟ್ ಫುಡ್ ಅಂಗಡಿಯಲ್ಲಿರುವ ಸ್ಟೀಲ್ ಚಮಚ ತೆಗೆದುಕೊಂಡು ತಲೆಗೆ ಮತ್ತು ಕುತ್ತಿಗೆಗೆ ಹೊಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous article‘ಯಲಾ ಕುನ್ನಿ’ಗೆ ವಜ್ರಮುನಿ ದನಿ ಕೋಮಲ್ ಕಾಮಿಡಿ ಕಮಾಲ್
Next articleನಾಳೆ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ