ಕ್ರೇಜ್ ಕಳೆದುಕೊಂಡ ಕೇಜ್ರಿವಾಲ್

0
23

ಇಡೀ ರಾಷ್ಟ್ರದಲ್ಲಿ ಕಾಂಗ್ರೆಸ್ ಕುಸಿಯುತ್ತಿದೆ

ಹುಬ್ಬಳ್ಳಿ: ಈ ದೆಹಲಿ ಚುನಾವಣೆಯ ಫಲಿತಾಂಶದಲ್ಲಿ ನಾವು ಸ್ಪಷ್ಟ ಬಹುಮತದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ದೆಹಲಿ ಚುನಾವಣಾ ಫಲಿತಾಂಶ ಕುರಿತಂತೆ ಮಾತನಾಡಿರುವ ಅವರು ದೆಹಲಿ ಜನ ಮೋದಿ ನಾಯಕತ್ವ ಒಪ್ಪಿದ್ದಾರೆ. ದೆಹಲಿಯನ್ನು ಅಭಿವೃದ್ಧಿ ಮಾಡೋದಾಗಿ ಮೋದಿ ಹೇಳಿದ್ದಾರೆ. ನಾವು ಸ್ಪಷ್ಟ ಬಹುಮತದಲ್ಲಿ ಅಧಿಕಾರಕ್ಕೆ ಬರುತ್ತೇವೆ, ಕಾಂಗ್ರೆಸ್ ಒಂದು ಕುಟುಂಬದ ಪಕ್ಷ. ಇಡೀ ರಾಷ್ಟ್ರದಲ್ಲಿ ಕಾಂಗ್ರೆಸ್ ಕುಸಿಯುತ್ತಿದೆ. ತೆಲಂಗಾಣ, ಕರ್ನಾಟಕದಲ್ಲಿ ಮಾತ್ರ ಅಧಿಕಾರದಲ್ಲಿದೆ. ಕಾಂಗ್ರೆಸ್ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಈ ಚುನಾವಣೆಯಿಂದ ಕಾಂಗ್ರೆಸ್ ಬಣ್ಣ ಬಯಲಾಗಿದೆ. ದಿಲ್ಲಿ ಜನರ ಆರ್ಶೀವಾದ ಬಿಜೆಪಿಗೆ ಸಿಕ್ಕಿದೆ. ಕೇಜ್ರಿವಾಲ್ ತಮ್ಮ ಕ್ರೇಜ್ ಕಳೆದುಕೊಂಡಿದ್ದಾರೆ, ಅಣ್ಣಾ ಹಜಾರೆ ಹೋರಾಟವನ್ನು ಬಳಸಿಕೊಂಡು ಕೇಜ್ರಿವಾಲ್ ಅಧಿಕಾರದ ಗದ್ದುಗೆ ಏರಿದ್ದರು. ಅವರ ಆಡಳಿತದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಜನರಿಗೆ ನಿರಾಸೆಯಾಗಿದೆ. ಹೀಗಾಗಿ ದಿಲ್ಲಿಯ ಜನ ಬಿಜೆಪಿ ಕೈ ಹಿಡಿದಿದ್ದಾರೆ ಎಂದರು.

Previous articleSorry ಸೆಲೆಬ್ರಿಟೀಸ್…
Next articleಕಂದಕಕ್ಕೆ ಉರುಳಿದ ಬಸ್: ಪ್ರಯಾಣಿಕರು ಪ್ರಾಣಪಾಯದಿಂದ ಪಾರು