ಕ್ರಿಸ್ಮಸ್ ಸಂಭ್ರಮದಲ್ಲಿ ಚಿತ್ರರಂಗದ ತಾರೆಯರು

0
19

ಬೆಂಗಳೂರು: ಸಿನಿಮಾ ನಟ-ನಟಿಯರು ಕೂಡ ಕ್ರಿಸ್ಮಸ್ ಹಬ್ಬ ಸೆಲೆಬ್ರೇಟ್ ಮಾಡಿದ್ದಾರೆ. ಕ್ರಿಸ್ಮಸ್ ಹಬ್ಬದಂದು ಚೆಂದದ ಫೋಟೋಗಳನ್ನ ಕೂಡ ಶೇರ್ ಮಾಡುತ್ತಿದ್ದಾರೆ.
ಶ್ರೀಮುರಳಿ ಕೂಡ ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿದ್ದಾರೆ. ಪತ್ನಿ ವಿದ್ಯಾ ಮತ್ತು ಮಕ್ಕಳೊಂದಿಗಿನ ಹಬ್ಬದ ಫೋಟೋ ಶ್ರೀಮುರಳಿ ಶೇರ್ ಮಾಡಿದ್ದಾರೆ. ಕ್ರಿಸ್ಮಸ್ ಹಬ್ಬದ ದಿನದಂದು ‘ಗಟ್ಟಿಮೇಳ’ ಬ್ಯೂಟಿ ಶರಣ್ಯ ಶೆಟ್ಟಿ ಅವರು ಕೆಂಪು ಬಣ್ಣದ ಉಡುಗೆಯಲ್ಲಿ ಮಸ್ತ್ ಆಗಿ ಮಿಂಚಿದ್ದಾರೆ. ಕೆಂಪು ಕಲರ್ ಗೌನ್‌ಗೆ ಬಿಳಿ ಬಣ್ಣದ ಉಲ್ಲನ್ ಶಾಲ್ ಮತ್ತು ಟೋಪಿ ಧರಿಸಿ ಹಾಟ್ ಆಗಿ ಕಂಡಿದ್ದಾರೆ. ಶರಣ್ಯ ಲುಕ್‌ಗೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.
ನಟಿ ಪಾರುಲ್ ಯಾದವ್ ಅವರು ತಮ್ಮ ನಾಯಿ ಮರಿಗಳ ಜೊತೆ ಕ್ರಿಸ್ಮಸ್ ಆಚರಣೆಯ ಫೋಟೋ ಹಂಚಿಕೊಂಡಿದ್ದಾರೆ.
ಕ್ರಿಸ್ಮಸ್‌ ಹಬ್ಬದ ಖುಷಿಯಲ್ಲಿ ರಣ್‌ಬೀರ್‌-ಆಲಿಯಾ ಭಟ್‌ ಜೋಡಿ, ಮಗಳ ಮುಖವನ್ನ ರಿವೀಲ್‌ ಮಾಡಿದ್ದಾರೆ. ಬಾಲಿವುಡ್ ನಟಿ ಆಲಿಯಾ ಭಟ್ ದಂಪತಿ ಕೂಡ ತಮ್ಮ ಕುಟುಂಬದ ಜೊತೆ ಅದ್ದೂರಿಯಾಗಿ ಕ್ರಿಸ್ಮಸ್ ಹಬ್ಬ ಆಚರಣೆ ಮಾಡಿದ್ದಾರೆ.

Previous articleಯತ್ನಾಳ ಪರ ಬೆಲ್ಲದ್ ಬ್ಯಾಟಿಂಗ್
Next articleಗ್ಯಾಸ್ ಗೀಸರ್‌ ಸೋರಿಕೆ: ಯುವತಿ ಸಾವು