ಬೆಂಗಳೂರು: ಡಾಲಿ ಧನಂಜಯ್ ಅಭಿನಯದ ಕೋಟಿ ಸಿನಿಮಾದ ಮೊದಲ ಹಾಡು ‘ಮಾತು ಸೋತು’ ಬಿಡುಗಡೆಯಾಗಿದೆ.
ಸರೆಗಮ ಕನ್ನಡ ಯೂಟ್ಯೂಬ್ ಚಾನಲ್‌ನಲ್ಲಿ ಹಾಡಿನ ಲಿರಿಕಲ್ ವಿಡಿಯೋ ಅನಾವರಣಗೊಂಡಿದೆ. ಇನ್ನು .ಈ ಹಾಡನ್ನು ವಾಸುಕಿ ವೈಭವ್ ಸಂಯೋಜಿಸಿದ್ದು, ಯೋಗರಾಜ್ ಭಟ್ ಸಾಹಿತ್ಯ ರಚಿಸಿ, ಅರ್ಮಾನ್ ಮಲಿಕ್ ಹಾಡಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಡಾಲಿ ಧನಂಜಯ್ ಪೋಸ್ಟ್ ಮಾಡಿದ್ದು ಬಂತು ಬಂತು ‘ಮಾತು ಸೋತು’ ಮನಸ ಗೆಲ್ಲೋಕೆ🥰 ಗಂಡ್ ಹೈಕ್ಳೆಲ್ಲ ನಿಮ್ ಹುಡ್ಗಿಗೆ ಈ ಹಾಡ್ ಹೇಳೋಕೆ ರೆಡಿ ಆಗಿ ಎಂದಿದ್ದಾರೆ…
ಜೂನ್ 14 ರಂದು ರಾಜ್ಯಾದ್ಯಂತ ಸಿನಿಮಾ ಬಿಡುಗಡೆಯಾಗುತ್ತಿದೆ.
ಅದಕ್ಕೂ ಮುನ್ನ ಮೊದಲ ಹಾಡನ್ನು ನೀವೊಮ್ಮೆ ಕೇಳಿ…