ಕೊಲ್ಹಾಪುರದಲ್ಲಿ ಶಾಸಕರನ್ನು ತಡೆದು ಶಿವಸೇನೆ ಭಂಡತನ

0
8

ಬೆಳಗಾವಿ: ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಿವಸೇನೆಯ ಉದ್ದಟತನ ಮುಂದುವರೆದಿದೆ.
ಮಹಾಲಕ್ಷ್ಮಿ ದೇವಸ್ಥಾನಕ್ಕೆ ತೆರಳಿದ್ದ ಕರ್ನಾಟಕದ ಶಾಸಕರನ್ನು ತಡೆದು ಘೇರಾವ ಹಾಕುವ ಮೂಲಕ ಶಿವಸೇನೆ ಪುಂಡಾಟ ಮೆರೆದಿದೆ. ಉದ್ದವ ಠಾಕ್ರೆ ಬಣದ ಕೊಲ್ಲಾಪುರ ಜಿಲ್ಲಾ ಅಧ್ಯಕ್ಷ ವಿಜಯ ದೇವಣೆ ನೇತೃತ್ವದಲ್ಲಿ ಘೇರಾವ ಹಾಕಲಾಗಿದೆ. ಕೊಲ್ಲಾಪುರದ ಮಹಾಲಕ್ಷ್ಮೀ ಅಂಬಾಬಾಯಿ ದರ್ಶನಕ್ಕೆ ದೇವಸ್ಥಾನಕ್ಕೆ ತೆರಳಿದ್ದ ಔರಾದ ಬಿಜೆಪಿ ಶಾಸಕ ಪ್ರಭು ಚೌಹಾನ್ ಅವರು
ದೇವಸ್ಥಾನದಿಂದ ಹೊರ ಬಂದಾಗ ಘೇರಾವ ಹಾಕಿ ಆಕ್ರೋಶ ಹೊರಹಾಕಿದ್ದಾರೆ.
ಬೆಳಗಾವಿಯಲ್ಲಿ ನಮಗೆ ಮಹಾಮೇಳಾವ ಮಾಡಲು ನೀವು ಬಿಟ್ಟಿಲ್ಲ ಯಾಕೆ ಎಂದು ಪ್ರಶ್ನಿಸಿ ನಮ್ಮ ಪರವಾಗಿ ನೀವು ಸದನದಲ್ಲಿ ಮಾತನಾಡಬೇಕು ಎಂದು ಒತ್ತಡ ಹಾಕಲಾಯಿತು. ಮೊನ್ನೆ ನಾವು ಬೆಳಗಾವಿಗೆ ತೆರಳುತ್ತಿದ್ದಾಗ ನಮಗೆ ಗಡಿಯಲ್ಲಿ ತಡೆದಿದ್ದಾರೆ. ನೀವು ನಮ್ಮನ್ನು ತಡೆದ್ರೆ ‌ನಾವೂ ಕರ್ನಾಟಕದ ಯಾವುದೆ ವಾಹನಗಳನ್ನು ಮಹಾರಾಷ್ಟ್ರಕ್ಕೆ ಬಿಡಲ್ಲಾ ಎಂದು ಉದ್ದಟತನದ ಮಾತುಗಳನ್ನಾಡಿ ಭಂಡತನ ಪ್ರದರ್ಶಿಸಿದ್ದಾರೆ.

Previous articleಲಿಂಗಾಯತರ ಮೇಲೆ ಹಲ್ಲೆ ಮಾಡಿದ ಏಕೈಕ ಸರ್ಕಾರ ಕಾಂಗ್ರೆಸ್‌
Next articleಪತ್ನಿ ಶೀಲ ಶಂಕಿಸಿ ಕೊಲೆ