ಕೇಂದ್ರ ಸರ್ಕಾರದ ವಿರುದ್ಧ ಬೆಂಗಳೂರಿನಲ್ಲಿ ನಾಳೆ ಧರಣಿ

0
21

ಬಾಗಲಕೋಟೆ : ಬರ ಪರಿಹಾರ ವಿತರಣೆ ಯಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವ ಕೇಂದ್ರ ಸರ್ಕಾರದ ನಡೆ ಖಂಡಿಸಿ ಏ.೨೮ರ ರವಿವಾರ ಬೆಂಗಳೂರಿನ ವಿಧಾನಸೌಧ ಮುಂಭಾಗ ಧರಣಿ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಬಾಗಲಕೋಟೆ ಲೋಕಸಭಾ ಕ್ಷೇತ್ರದ ಬನಹಟ್ಟಿ ಪಟ್ಟಣದಲ್ಲಿ ನಡೆದ ಪ್ರಜಾಧ್ವನಿ-೨ ಸಮಾವೇಶದಲ್ಲಿ ಅವರು ಮಾತನಾಡಿದರು.

ನಾವು ೧೮ ಸಾವಿರ ಕೋಟಿ ಕೇಳಿದರೆ ಕೇಂದ್ರ ಸರ್ಕಾರ ೩೪೯೮ ಕೋಟಿ ರೂ. ಕೊಡುವುದಾಗಿ ಹೇಳಿದೆ. ನಾವು ಸುಪ್ರೀಂ ಕೋರ್ಟಿಗೆ ಹೋಗಿ ಕೇಂದ್ರ ಸರ್ಕಾರವನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡ ನಂತರ ಇಷ್ಟು ಕಡಿಮೆ ಮೊತ್ತ ನೀಡುವುದಾಗಿ ಘೋಷಿಸಿದೆ. ಇದನ್ಜು ನಾವು ಒಪ್ಪುವುದಿಲ್ಲ. ರವಿವಾರ ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ ಜತೆಯಾಗಿ ಧರಣಿ ನಡೆಸುವುದಾಗಿ ಹೇಳಿದರು.

Previous articleರಾಯಚೂರು ಹನುಮನ ದೇವಸ್ಥಾನಕ್ಕೆ  ಕಿಚ್ಚ ಸುದೀಪ ಭೇಟಿ
Next articleನಿಮಗೆ ಬಿದ್ದ ಓಟಿಗೆ ನೀವು ಮಾಡಿದ ಅವಮಾನ ಅಲ್ಲವೇ?