ಇಳಕಲ್ : ಇಲ್ಲಿನ ಮುಸ್ಲಿಂ ಸಮಾಜದ ವಿವಿಧ ಮಸೀದೆಗಳ ವತಿಯಿಂದ ಶುಕ್ರವಾರದಂದು ಮಧ್ಯಾಹ್ನ ಬೃಹತ್ ಪ್ರತಿಭಟನೆಯನ್ನು ಮಾಡಲಾಯಿತು.
ನಗರದ ಎಲ್ಲಾ ೧೭ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಗುಂಪು ಗುಂಪಾಗಿ ಕಂಠಿ ಸರ್ಕಲ್ ಗೆ ಆಗಮಿಸಿದ ಮುಸ್ಲಿ ಬಾಂಧವರು ಮನವಿ ಪತ್ರವನ್ನು ಗ್ರೇಡ್ ಟು ತಹಸೀಲ್ದಾರ ಈಶ್ವರ ಗಡ್ಡಿ ಅವರಿಗೆ ನೀಡಿದರು.
ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಉಸ್ಮಾನಗಣಿ ಹುಮ್ನಾಬಾದ ಲಿಮ್ರಾ ಸಂಸ್ಥೆಯ ಅಧ್ಯಕ್ಷ ಅಬ್ದುಲರಜಾಕ ತಟಗಾರ ಧರ್ಮಗುರು ಬಾವೂದ್ದಿನಸಾಬ ಖಾಜಿ ಸೇರಿದಂತೆ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು .
ಇದೇ ಸಮಯದಲ್ಲಿ ಮುರ್ತುಜಾ ಖಾದ್ರಿ ದರ್ಗಾ ಬಗ್ಗೆ ಮಾತುಕತೆ ನಡೆದು ಒಂದು ವರ್ಷದಲ್ಲಿ ಮೂವತ್ತು ಲಕ್ಷ ರೂ ಹಾನಿಯಾಯಿತು ಎಂದು ಹೇಳಿದ್ದಕ್ಕೆ ಕಳೆದ ೨೫ ವರ್ಷಗಳ ಲೆಕ್ಕ ಎಲ್ಲಿ ಎಂದು ಕೆಲವರು ಪ್ರಶ್ನಿಸ ತೊಡಗಿದರು
ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ಹದಗೆಡುವ ಲಕ್ಷ್ಮಣಗಳು ಕಂಡು ಬಂದಾಗ ಪಿಎಸ್ ಐ ಷಹಜಹಾನ ನಾಯಕ ಮಾತುಕತೆ ಮಾಡುತ್ತಿರುವವರನ್ನು ಅಲ್ಲಿಂದ ಚದುರಿಸಿ ಕಳಿಸಿದರು.