ಕೆಲವು ರೈಲುಗಳ ಸಂಚಾರ ರದ್ದು, ಇನ್ನು ಕೆಲವು ಭಾಗಶಃ ರದ್ದು

0
12

ಹುಬ್ಬಳ್ಳಿ : ಗೋಕಾಕ್ ರೋಡ್-ಘಟಪ್ರಭಾ ಹಾಗೂ ಕುಡಚಿ-ಉಗಾರ ಖುರ್ದ್ ರೈಲು ಮಾರ್ಗಗಳ ನಡುವೆ ವಿದ್ಯುತ್ ಉಪಕರಣಗಳ (OHE) ಮಾರ್ಪಾಡು ಕಾರ್ಯ ನಡೆಯಲಿರುವ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಹಾಗೂ ಇನ್ನು ಕೆಲವು ಭಾಗಶಃ ರದ್ದು ಪಡಿಸಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ರದ್ದು: ಏಪ್ರಿಲ್ 21 ರಂದು ಪ್ರಯಾಣ ಆರಂಭಿಸಬೇಕಿದ್ದ ರೈಲು ಸಂಖ್ಯೆ 07303 ಬೆಳಗಾವಿ-ಮಿರಜ್ ವಿಶೇಷ ರೈಲು ರದ್ದಾಗಿದೆ. ಅದೇ ರೀತಿ, ಏಪ್ರಿಲ್ 21 ರಂದು ಪ್ರಯಾಣ ಆರಂಭಿಸಬೇಕಿದ್ದ ರೈಲು ಸಂಖ್ಯೆ 07304 ಮಿರಜ್-ಬೆಳಗಾವಿ ವಿಶೇಷ ರೈಲು ಸಹ ರದ್ದಾಗಿದೆ.

ಭಾಗಶಃ ರದ್ದು: ಏಪ್ರಿಲ್ 22 ರಂದು ಹೊರಡುವ ರೈಲು ಸಂಖ್ಯೆ 07303 ಬೆಳಗಾವಿ-ಮಿರಜ್ ವಿಶೇಷ ರೈಲು ಕುಡಚಿವರೆಗೆ ಮಾತ್ರ ಸಂಚರಿಸಲಿದೆ. ಈ ರೈಲು ಕುಡಚಿ ಮತ್ತು ಮಿರಜ್ ನಡುವಿನ ಸಂಚಾರವನ್ನು ರದ್ದುಗೊಳಿಸಲಾಗಿದೆ. ಏಪ್ರಿಲ್ 22 ರಂದು ರೈಲು ಸಂಖ್ಯೆ 07304 ಮಿರಜ್-ಬೆಳಗಾವಿ ವಿಶೇಷ ರೈಲು ಮಿರಜ್ನ ಬದಲು ನಿಗದಿತ ಸಮಯಕ್ಕೆ ಕುಡಚಿಯಿಂದ ತನ್ನ ಪ್ರಯಾಣವನ್ನು ಆರಂಭಿಸಲಿದೆ. ಮಿರಜ್ ಮತ್ತು ಕುಡಚಿ ನಡುವಿನ ಸಂಚಾರವನ್ನು ರದ್ದುಗೊಳಿಸಲಾಗಿದೆ.
ಏಪ್ರಿಲ್ 23 ಹಾಗೂ 24 ರಂದು ಸಂಚರಿಸುವ ರೈಲು ಸಂಖ್ಯೆ 07301 ಬೆಳಗಾವಿ-ಮಿರಜ್ ವಿಶೇಷ ರೈಲು ಕುಡಚಿವರೆಗೆ ಮಾತ್ರ ಸಂಚರಿಸಲಿದೆ. ಕುಡಚಿ ಮತ್ತು ಮಿರಜ್ ನಡುವಿನ ಸಂಚಾರವನ್ನು ಭಾಗಶಃ ರದ್ದುಪಡಿಸಲಾಗಿದೆ. ಏಪ್ರಿಲ್ 23 ಹಾಗೂ 24 ರಂದು ರೈಲು ಸಂಖ್ಯೆ 07302 ಮಿರಜ್-ಬೆಳಗಾವಿ ವಿಶೇಷ ರೈಲು ಮಿರಜ್ನ ಬದಲು ತನ್ನ ನಿಗದಿತ ಸಮಯಕ್ಕೆ ಕುಡಚಿಯಿಂದ ಪ್ರಯಾಣ ಆರಂಭಿಸಲಿದೆ. ಮಿರಜ್ ಮತ್ತು ಕುಡಚಿ ನಡುವಿನ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

Previous articleಮಹಾಕಾಳೇಶ್ವರ ದೇವಾಲಯಕ್ಕೆ ನಟ ಯಶ್​ ಭೇಟಿ
Next articleಜನಿವಾರ್‌ ಪ್ರಕರಣ: ಬೆಳಗಾವಿಯಲ್ಲಿ ಬ್ರಾಹ್ಮಣ ಸಮಾಜದಿಂದ ಪ್ರತಿಭಟನೆ