ಕೆಂಡ ಹಾಯುವಾಗ ಬಿದ್ದ ಬಾಲಕನ ವಿಡಿಯೋ ವೈರಲ್‌

0
43

ತಮಿಳುನಾಡಿನ ದೇವಸ್ಥಾನವೊಂದರಲ್ಲಿ ಅಗ್ನಿಹೋತ್ರ ಆಚರಣೆ ವೇಳೆ 7 ವರ್ಷದ ಬಾಲಕ ಕೆಂಡದ ಮೇಲೆ ಬಿದ್ದು ಘಟನೆ ನಡೆದಿದೆ.


ಕಳೆದ ಭಾನುವಾರ ಈ ಘಟನೆ ನಡೆದಿದ್ದು ಕೆಂಡಹಾಯುವಾಗ ಬಾಲಕ ಬಿದ್ದು ಗಾಯಗೊಂಡು ಸುಟ್ಟ ಗಾಯಗಳಾಗಿವೆ. ಗ್ರಾಮದಲ್ಲಿ ಉತ್ಸವವನ್ನು ಆಚರಿಸುವ ವೇಳೆ ಎಲ್ಲರೂ ಕೆಂಡದ ಮೇಲೆ ಒಬ್ಬರ ಹಿಂದೆ ಒಬ್ಬರು ದಾಟಿದರು, ಆದರೆ 7 ವರ್ಷದ ಮೋನಿಶ್‌ನ ಸರದಿ ಬರುತ್ತಿದ್ದಂತೆ, ಅವನು ಮುಂದೆ ಹೋಗಲು ಹಿಂಜರಿದನು. ಆದರೆ ಬಾಲಕನಿಗೆ ಹೋಗುವಂತೆ ಎಲ್ಲರೂ ಮನವೊಲಿಸಿದರು. ಹುಡುಗ ಇನ್ನೂ ಹಿಂಜರಿಯುತ್ತಿದ್ದಂತೆ, ಆತನ ಹಿಂದೆ ಇದ್ದವರು ಅವನ ಕೈಯನ್ನು ಹಿಡಿದು ಅವನೊಂದಿಗೆ ಓಡಲು ಶುರುಮಾಡಿದರು. ತಕ್ಷಣವೇ ಇಬ್ಬರೂ ಕೆಂಡದ ಮೇಲೆ ಬಿದ್ದಿದ್ದಾರೆ. ಅಲ್ಲಿದ್ದವರು ಓಡಿ ಬಂದು ಅವರನ್ನು ಮೇಲಕ್ಕೆತ್ತಿದ್ದಾರೆ. ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ, ಹಾಗೂ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Previous articleಜಯದೇವ ಆಸ್ಪತ್ರೆ ಸೆಪ್ಟೆಂಬರ್ 17 ಕ್ಕೆ ಅನಾವರಣ
Next articleಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಕೊಲೆ