ಬೆಳಗಾವಿ: ಕುಡುಕ ಗಂಡನ ಕಾಟ ತಾಳಲಾರದೆ ತನ್ನ ಮೂವರು ಮಕ್ಕಳೊಂದಿಗೆ ಗೃಹಿಣಿಯೊಬ್ಬರು ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ರಾಯಬಾಗ ತಾಲ್ಲೂಕಿನ ಚಿಂಚಲಿ ಪಟ್ಟಣದ ಶಾರದಾ ಢಾಲೆ(೩೮) ಎಂಬುವಳೇ ತನ್ನ ಮೂವರು ಮಕ್ಕಳಾದ ಅನುಷಾ(೧೦), ಅಮೃತಾ(೧೪), ಆದರ್ಶ(೮) ಜತೆ ಕೃಷ್ಣೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಾರದಳ ಪತಿ ಅಶೋಕ ಡಾಲೆ(೪೫) ಸದಾ ಕುಡಿದು ಬಂದು ಪತ್ನಿ, ಮಕ್ಕಳ ಮೇಲೆ ತನ್ನ ಪೌರುಷ ಮೆರೆಯುತ್ತಿದ್ದ. ನಿತ್ಯ ಹೊಡೆದು ಬಡಿದು ಕಾಟ ಕೊಡುತ್ತಿದ್ದ. ಎಷ್ಟು ಬುದ್ಧಿಮಾತು ಹೇಳಿದರೂ ಕೇಳುತ್ತಿರಲಿಲ್ಲ. ಇದರಿಂದ ಮನನೊಂದ ಗೃಹಿಣಿ ಮಕ್ಕಳ ಜತೆ ಜೀವನಕ್ಕೆ ಅಂತ್ಯ ಹಾಡಿದ್ದಾರೆ ಎಂದು ಶಂಕಿಸಲಾಗಿದೆ. ಕುಡಚಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅಶೋಕ ಡಾಲೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.