ಕುಕ್ಕೆಯಿಂದ ನಿರ್ಗಮಿಸಿದ ಕತ್ರಿನಾ ಕೈಫ್

0
19


ಕುಕ್ಕೆ: ಎರಡನೇ ದಿನ ಕ್ಷೇತ್ರದಲ್ಲಿ ಆಶ್ಲೇಷ ಬಲಿ ಸೇವೆ ನೆರವೇರಿಸಿದ ಕತ್ರಿನಾ ಕೈಫ್
ಸುಬ್ರಹ್ಮಣ್ಯ, ಮಾ.೧೨: ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಎರಡನೇವಾದ ಬುಧವಾರ ಸರ್ಪ ಸಂಸ್ಕಾರ ಸೇವೆ ನೆರವೇರಿಸಿ, ಆಶ್ಲೇಷ ಬಲಿ ಪೂಜೆ ನೆರವೇರಿಸಿದರು. ಬಳಿಕ ಕುಕ್ಕೆಯಿಂದ ನಿರ್ಗಮಿಸಿದರು.
ಕುಕ್ಕೆ ಸುಬ್ರಮಣ್ಯ ಕ್ಷೇತ್ರಕ್ಕೆ ಮಂಗಳವಾರ ಆಗಮಿಸಿದ್ದ ಕತ್ರಿನಾ ಕೈಫ್ ಅವರು ಮಂಗಳವಾರ ಕ್ಷೇತ್ರದಲ್ಲಿ ಸರ್ಪ ಸಂಸ್ಕಾರ ಸೇವೆ ನೆರವೇರಿಸಿ, ಕ್ಷೇತ್ರದಲ್ಲಿ ಅನ್ನಪ್ರಸಾದ ಸ್ವೀಕರಿಸಿ ಸುಬ್ರಹ್ಮಣ್ಯದ ಖಾಸಗಿ ವಸತಿಗ್ರಹದಲ್ಲಿ ತಂಗಿದ್ದರು. ಬುಧವಾರ ಬೆಳಗ್ಗೆ ನಟಿ ಕತ್ರಿನಾ ಕೈಫ್ ಎರಡನೇ ದಿನದ ಸರ್ಪ ಸಂಸ್ಕಾರ ಸೇವೆ ಹಾಗೂ ಸೇವೆಯ ಇತರೆ ವಿಧಿ ವಿಧಾನಗಳಲ್ಲಿ ಪಾಲ್ಗೊಂಡರು. ಬಳಿಕ ಆಶ್ಲೇಷಬಲಿ ಸೇವೆ ನೆರವೇರಿಸಿದರು. ಮಧ್ಯಾಹ್ನ ಶ್ರೀ ದೇವರ ದರ್ಶನ ಪಡೆದು ಮಹಾಪೂಜೆಯಲ್ಲಿ ಪಾಲ್ಗೊಂಡರು. ಹಾಗೂ ನಾಗಪ್ರತಿಷ್ಠೆ ಸೇವೆಯಲ್ಲಿ ಪಾಲ್ಗೊಂಡರು. ಬಳಿಕ ಪ್ರಸಾದ ಸ್ವೀಕರಿಸಿದರು. ಬಳಿಕ ಕತ್ರಿನಾ ಕೈಫ್ ಅವರು ದೇವಳದಿಂದ ಹೊರ ಬಂದು ಕಾರಿನಲ್ಲಿ ವಾಸ್ತವ್ಯ ಮಾಡಿದ್ದ ವಸತಿ ಗ್ರಹಕ್ಕೆ ತೆರಳಿ ಅಲ್ಲಿಂದ ಮಂಗಳೂರು ಕಡೆಗೆ ತೆರಳಿದರು.
ಎರಡನೇ ದಿನವೂ ಕತ್ರಿನಾ ಕೈಫ್ ಅವರು ಮುಖಕ್ಕೆ ಮಾಸ್ಕ್, ತಲೆಗೆ ದುಪ್ಪಟ್ಟ ಧರಿಸಿದ್ದರು. ಹಸುರು ಕಂದು ಬಣ್ಣದ ಚೂಡಿದರ್ ಧರಿಸಿದ್ದ ಕತ್ರಿನಾ ಕೈಫ್ ಅವರು ಎರಡನೇ ದಿನವೂ ಮುಖ ಮುಚ್ಚಿಕೊಂಡು, ಮಾಧ್ಯಮದವರಿಂದ ಅಂತರ ಕಾಯ್ದುಕೊಂಡೇ ಓಡಾಡಿದರು. ಮಹಾಪೂಜೆ ವೇಳೆ ಮಾಸ್ಕ್ ತೆಗೆದು ಪೂಜೆಯಲ್ಲಿ ಪಾಲ್ಗೊಂಡರು. ಬುಧವಾರವೂ ವಿಡಿಯೋ ಚಿತ್ರಿಕರಿಸುತ್ತಿದ್ದ ಮಾಧ್ಯಮದರಲ್ಲಿ ಕತ್ರಿನಾ ಜತೆಗಿದ್ದವರು ವಿಡಿಯೋ ಮಾಡದಂತೆ ತಿಳಿಸಿದರು. ಖಾಸಗಿಯಾಗಿ ಇಲ್ಲಿಗೆ ಭೇಟಿ ನೀಡಿದ್ದು, ವಿಡಿಯೋ ಮಾಡಬೇಡಿ ಎಂದವರು ಈ ವೇಳೆ ಉತ್ತರಿಸಿದ್ದಾರೆ. ಕ್ಷೇತ್ರಕ್ಕೆ ಗಣ್ಯ ವ್ಯಕ್ತಿಗಳು, ಸಿನಿ ತಾರೆಯರು ಭೇಟಿ ನೀಡಿದ ವೇಳೆ ದೇವಳದ ವತಿಯಿಂದ ಅವರನ್ನು ಗೌರವಿಸಲಾಗುತ್ತದೆ. ಆದರೆ ಕತ್ರಿನಾ ಕೈಫ್ ಅವರು ದೇವಳದ ಕಛೇರಿಗೂ ಭೇಟಿ ನೀಡದೇ, ದೇವಳದ ಗೌರವವನ್ನೂ ಸ್ವೀಕರಿಸದೇ ತೆರಳಿದ್ದಾರೆ ಎನ್ನಲಾಗಿದೆ
ಕತ್ರಿನಾ ಕೈಫ್ ಅವರು ಸಂತಾನ ಪ್ರಾಪ್ತಿಗಾಗಿ, ವೃತ್ತಿ ಜೀವನ ಏಳಿಗೆಗೆ, ಕುಟುಂಬದ ಏಳಿಗೆಗಾಗಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸೇವೆಗಳನ್ನು ನೆರವೇರಿಸಿದ್ದರು.

Previous articleಅಪರಿಚಿತ ವಾಹನ ಡಿಕ್ಕಿ ಹೊಡೆದು ಹಿಂಬದಿ ಸವಾರ ಸಾವು
Next articleಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ನಿಧನ