ಕಿತ್ತಾಳೆ ಹಾಡಿಗೆ ಹೊಸ ರೂಪಾಂತರ…

0
30

ಬೆಂಗಳೂರು: ‘ರೂಪಾಂತರ’ ಚಿತ್ರದ ‘ಕಿತ್ತಾಳೆ’ ಎನ್ನುವ ಮೊದಲ ಹಾಡು ಬಿಡುಗಡೆಗೊಂಡಿದೆ.
ರಾಜ್ ಅವರ ಸಾಹಿತ್ಯಕ್ಕೆ ಮಿಧುನ್ ಅವರ ಸಂಗೀತ ಇದ್ದು, ಮಾದೇವ ಖ್ಯಾತಿಯ ಗಾಯಕಿ ಚೈತ್ರ ಜೆ ಆಚಾರ್ ಅವರು ಈ ಹಾಡಿಗೆ ಧ್ವನಿ ನೀಡಿದ್ದಾರೆ. ಮಿಥಿಲೇಶ್ ಎಡವಲತ್ ಎನ್ನುವ ಪ್ರತಿಭಾವಂತ ಯುವಕನ ಪ್ರಥಮ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದ್ದು, ಕನ್ನಡ ಚಿತ್ರರಂಗದಲ್ಲೊಂದು ಹೊಸ ಅಲೆಯನ್ನು ಸೃಷ್ಟಿ ಮಾಡುವ ಎಲ್ಲಾ ಲಕ್ಷಣ ಕಾಣಿಸುತ್ತಿದೆ. ರಾಜ್ ಬಿ ಶೆಟ್ಟಿಯವರು ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಅಲ್ಲದೆ, ಸಂಭಾಷಣೆಯನ್ನು ಬರೆದಿದ್ದಾರೆ. ಜೊತೆಗೆ ತಮ್ಮ ನಿರ್ಮಾಣ ಸಂಸ್ಥೆಯಾದ ಲೈಟರ್ ಬುದ್ಧ ಫಿಲ್ಮ್‌ ಮೂಲಕ ತೆರೆಗೂ ತರುತ್ತಿದ್ದಾರೆ. ಸುಹಾನ್ ಪ್ರಸಾದ್ ಈ ಚಿತ್ರದ ನಿರ್ಮಾಣವನ್ನು ಮಾಡಿದ್ದಾರೆ. ಪ್ರವೀಣ್ ಶ್ರೀಯಾನ್ ಛಾಯಗ್ರಹಣವಿದೆ, ಸೋಮಶೇಖರ್ ಬೋಲೇಗಾಂವ್, ಲೇಖಾ ನಾಯ್ಡು, ಹನುಮ್ಮಕ್ಕ, ಭರತ್ ಜಿ.ಬಿ, ಅಂಜನ್ ಭಾರಧ್ವಾಜ್ ಮತ್ತಿರರ ತಾರಗಣ ಚಿತ್ರಕ್ಕಿದೆ. ಸಂಕಲನ ಭುವನೇಶ್ ಮಣಿವಣ್ಣನ್, ನಿರ್ಮಾಣ ವಿನ್ಯಾಸ ಪ್ರವೀಣ್ ಮತ್ತು ಅರ್ಷದ್ ನಾಕ್ಕೋತ್ ಅವರದ್ದಾಗಿದೆ.

‘ರೂಪಾಂತರ’ ಚಿತ್ರದ ‘ಕಿತ್ತಾಳೆ’ ಎನ್ನುವ ಸವಿಯಾದ ಹಾಡನ್ನು ನೀವೊಮ್ಮೆ ಕೇಳಿ…

Previous articleಮುಡಾ ಪ್ರಕರಣ: ನಿವೇಶನ ಪಡೆದವರ ಮಾಹಿತಿ ಬಹಿರಂಗಕ್ಕೆ ಆಗ್ರಹ
Next articleಶಿವಮೊಗ್ಗ – ಚೆನ್ನೈ ರೈಲು ಆರಂಭಕ್ಕೆ ಕ್ಷಣಗಣನೆ