ಕಾಳಿ ನದಿ ಸೇತುವೆ ಕುಸಿತ

0
18

ಕಾರವಾರ: ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ದಿಢೀರ್​ ಕುಸಿದ ಘಟನೆ ನಡೆದಿದೆ.
​ಕಾರವಾರದ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಸೇತುವೆ ಸಂಪರ್ಕ ಕಲ್ಪಿಸುತ್ತೆ. ರಾತ್ರಿಹೊತ್ತು ಪಿಲ್ಲರ್​ ಜಾರಿ ಬಿದ್ದಿದ್ದರಿಂದ ವಾಹನಗಳ ಸಂಚಾರವಿಲ್ಲದ ಕಾರಣ ಬಾರಿ ಅನಾಹುತ ತಪ್ಪಿದೆ. ಪಿಲ್ಲರ್‌ನ ಒಂದು ಭಾಗ ಕುಸಿದು ಬಿದ್ದರಿಂದ ಸ್ಲ್ಯಾಬ್​ ಮೇಲೆದ್ದಿದೆ. ಕಳೆದ ವರ್ಷ ಆಗಸ್ಟ್‌ 7ರಂದು ಕಾಳಿ ಸೇತುವೆ ಕುಸಿತಗೊಂಡಿತ್ತು. ಸದ್ಯ ಹಗಲು, ರಾತ್ರಿ ನಿರಂತರವಾಗಿ ಕಾರ್ಯಾಚರಣೆ ನಡೆಯುತ್ತಿದೆ. ಸೇತುವೆಯ ಅವಶೇಷಗಳನ್ನು ತೆರವುಗೊಳಿಸುವ ಕೆಲಸ ಶೇ. 70ರಷ್ಟು ಮುಗಿದಿದ್ದು, ತೆರವು ಕಾರ್ಯಾಚರಣೆಯ ನಡುವೆಯೇ ಕಂಬದ ಬುಡ ತುಂಡಾಗಿ, ಅದರ ಮೇಲಿದ್ದ ಸುಮಾರು 40 ಮೀಟರ್ ಉದ್ದದ ಸೇತುವೆ ಭಾಗ ನದಿಗೆ ವಾಲಿ ಬಿದ್ದಿದೆ. ಪಕ್ಕದಲ್ಲೇ ಹೊಸ ಸೇತುವೆ ಇದ್ದು, ಅದಕ್ಕೆ ಹಾನಿ ಆಗಿಲ್ಲ. ತೆರವು ಕಾರ್ಯ ನಡೆಸುವ ಭಾಗವಾಗಿ ಎರಡು ಕಂಬಗಳ ನಡುವಿನ ಸೇತುವೆ ಕೊಂಡಿ ಕಡಿತಗೊಳಿಸಲಾಗಿದೆ.

Previous articleಧರ್ಮಸ್ಥಳ ಸಂಘದ ಮಹಿಳೆಯರಿಂದ ಮಟ್ಟೆಣ್ಣವರಗೆ ಮುತ್ತಿಗೆ ಯತ್ನ
Next article“ತುಂಬಿದ ಕೊಡ ತುಳಿಕಿತಲೇ ಪರಾಕ್”