ಬಾಗಲಕೋಟೆ: ಜಿಲ್ಲೆಯಲ್ಲಿ ಮೂರು ನದಿಗಳು ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಜಿಲ್ಲೆಗೆ ಆಗಮಿಸಿ ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆ ನಡೆಸುತ್ತಿದ್ದಾರೆ.
ಮುಧೋಳ ನಗರಕ್ಕೆ ಹೊಂದಿಕೊಂಡಿರುವ ಯಾದವಾಡ ಸೇತುವೆ ವೀಕ್ಷಿಸಿದ ಅವರು ಕ್ಷೇತ್ರದ ಶಾಸಕರು ಆಗಿರುವ ಜಿಲ್ಲಾ ಉಸ್ತುವಾರಿ ಮಂತ್ರಿ ಆರ್.ಬಿ. ತಿಮ್ಮಾಪುರ ಅವರಿಂದ ಮಾಹಿತಿ ಪಡೆದುಕೊಂಡರು. ಸಚಿವರಿಗೆ ಕಂದಾಯ ಇಲಾಖೆ ಹೆಚ್ಚುವರಿ ಆಯುಕ್ತೆ ರಶ್ಮಿ ಮಹೇಶ ಸಾಥ್ ನೀಡಿದ್ದು ಮುಧೋಳ ನಗರದಲ್ಲಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದರು.
ಈ ವೇಳೆ ಕುಂಬಾರ ಓಣಿಯ ಮಹಿಳೆಯರು ನಮಗೆ ಶಾಶ್ವತ ಪರಿಹಾರ ಮಾಡಿ ಇಲ್ಲದಿದ್ದರೆ ನಮ್ಮನ್ನು ಭೇಟಿ ಮಾಡುವುದು ಬೇಡ ೨೦ ವರ್ಷಗಳಿಂದ ಇದೆ ಆಶ್ವಾಸನೆ ಆಗಿದೆ ನಾವು ಈಗಾಗಲೆ ಮುಳುಗಿದ್ದೇವೆ ನಿಮ್ಮ ಕಾಳಜಿ ಕೇಂದ್ರ ನಮಗೆ ಅವಶ್ಯಕತೆ ಇಲ್ಲ ಅಂತ ಶಾಶ್ವತ ಪರಿಹಾರ ಒದಗಿಸಿ ಎಂದರು.
ಜಿಲ್ಲಾಧಿಕಾರಿ ಕೆ.ಎಂ.ಜಾನಕಿ, ಎಸ್ಪಿ ವೈ.ಅಮರನಾಥ ರೆಡ್ಡಿ, ಜಮಖಂಡಿ ಎಸಿ ಶ್ವೇತಾ ಬೀಡಿಕರ್ ಇತರರು ಉಪಸ್ಥಿತರಿದ್ದರು.