ಕಾಲುವೆಗೆ ಈಜಲು ಹೋದ ಯುವಕ ನೀರುಪಾಲು

0
22

ಹೊಸಪೇಟೆ: ತುಂಗಭದ್ರಾ ಎಲ್‌ಎಲ್‌ಸಿ ಕಾಲುವೆಯಲ್ಲಿ ಈಜಲು ತೆರಳಿದ್ದ ಯುವಕನೊಬ್ಬ ನೀರಿನ ಸಳೆತಕ್ಕೆ ಸಿಲುಕಿ ಸಾವನ್ನಪ್ಪಿರುವ ಘಟನೆ ಹೊಸಪೇಟೆ ನಗರದಲ್ಲಿ ನಡೆದಿದೆ.
ನಗರದ ಚಿತ್ತವಾಡಗಿಯ ವಿನೋಬಾ ಭಾವೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಎ.ಎಂ.ಪಿ. ಶುಭಾ ಅವರ ಮಗ ಶಂಕರ್ (17) ಸಾವನ್ನಪ್ಪಿರುವ ಯುವಕನಾಗಿದ್ದಾನೆ. ಶನಿವಾರ ಬೆಳಗ್ಗೆ ಸಂಬಂಧಿಕರೊಂದಿಗೆ ನಗರದ ಚಿತ್ತವಾಡಗಿ ಸಮೀಪದ ಹರಿಯುತ್ತಿರುವ ತುಂಗಭದ್ರಾ ಜಲಾಶಯದ ಎಲ್‌ಎಲ್‌ಸಿ ಕಾಲುವೆಯಲ್ಲಿ ಈಜಲು ತೆರಳಿ ನೀರು ಪಾಲಾಗಿದ್ದ. ದಿನವಿಡೀ ಹುಡುಕಾಡಿದರೂ, ಪತ್ತೆಯಾಗಿರಲಿಲ್ಲ. ಭಾನುವಾರ ಮಧ್ಯಾಹ್ನ ತಾಲೂಕಿನ ಕಮಲಾಪುರ ಬಳಿಯಲ್ಲಿನ ಎಚ್‌ಪಿಸಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಕುರಿತು ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಹೊರ ರಾಜ್ಯದ ಕೂಲಿಕಾರ್ಮಿಕರ ದತ್ತಾಂಶ ಕ್ರೋಢೀಕರಣ ಸರ್ಕಾರದ ಹೊಣೆ
Next articleಪಿಎಸ್‌ಐ ಅನ್ನಪೂರ್ಣ ಅತ್ಯುನ್ನತ ಪದಕಕ್ಕೆ ಶಿಫಾರಸು