ಕಾನೂನಿಗೆ ತಲೆಬಾಗುತ್ತೇನೆ: ಸೋನು ನಿಗಮ್

0
15

ಬೆಂಗಳೂರು: ಖ್ಯಾತ ಗಾಯಕ ಸೋನು ನಿಗಮ್‌ ವಿರುದ್ಧ ಕನ್ನಡ ಚಿತ್ರರಂಗದಿಂದ ಕಠಿಣ ನಿರ್ಣಯ ಕೈಗೊಂಡ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ನಾನು ಕರ್ನಾಟಕದ ಕಾನೂನು ವ್ಯವಸ್ಥೆ ಮತ್ತು ಪೊಲೀಸ್ ಇಲಾಖೆಯ ಮೇಲೆ ಪೂರ್ಣ ಗೌರವದಿಂದ ಕಾನೂನಿಗೆ ತಲೆಬಾಗುತ್ತೇನೆ ಎಂದಿದ್ದಾರೆ. ಪ್ರಸಕ್ತ ವಿದ್ಯಮಾನಗಳನ್ನು ಗಮನಿಸಿದಂತಿರುವ ಸೋನು ನಿಗಮ್, ಸಾಮಾಜಿಕ ಜಾಲತಾಣದ ಮೂಲಕ ಸಂದೇಶ ರವಾನಿಸಿದ್ದಾರೆ. ‘ಈ ವಿಷಯವನ್ನು ಕರ್ನಾಟಕದ ಸೂಕ್ಷ್ಮವಂತರಿಗೆ ಬಿಡುತ್ತೇನೆ. ಇರದಲ್ಲಿ ತಪ್ಪು ಯಾರದ್ದು ಎಂಬುದನ್ನು ಅವರೇ ತೀರ್ಮಾನಿಸಲಿ. ಕಾನೂನು ಹಾಗೂ ಪೊಲೀಸರ ಮೇಲೆ ನನಗೆ ನಂಬಿಕೆಯಿದೆ. ಅದಕ್ಕೆ ತಲೆಬಾಗುತ್ತೇನೆ. ಕರ್ನಾಟಕದ ಜನತೆಯಿಂದ ಅತಿ ಹೆಚ್ಚು ಪ್ರೀತಿ ಸಿಕ್ಕಿದೆ. ಅದನ್ನು ಸದಾ ಸ್ಮರಿಸುತ್ತೇನೆ. ಜನತೆ ಯಾವುದೇ ರೀತಿಯ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ನಾನು ಬದ್ಧ ಎಂದಿದ್ದಾರೆ.

Previous articleಕೂಗಾಡುವುದನ್ನು ನಿಲ್ಲಿಸು: ಕಾರ್ಪೋರೇಟರ್‌ಗೆ ಕ್ಲಾಸ್ ತಗೆದುಕೊಂಡ ಎಂಎಲ್ಎ
Next articleಭೀಕರ ಅಪಘಾತ: ಮೂವರು ಸಾವು