ಕಾಡಾನೆ ದಾಳಿಗೆ ಕೂಲಿಕಾರ್ಮಿಕ ಸಾವು

0
19
ಸಾವು

ಚಿಕ್ಕಮಗಳೂರು: ಕಾಡಾನೆ ದಾಳಿಗೆ ತಮಿಳುನಾಡು ಮೂಲದ ಕೂಲಿಕಾರ್ಮಿಕನೊಬ್ಬ ಮೃತಪಟ್ಟರಿವ ಘಟನೆ ತಾಲೂಕಿನ ಕಂಚೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತ ಶ್ರೀಧ‌ರ್ ಬೆಳಗ್ಗೆ ರಮೇಶ್ ಎಂಬವರ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಒಂಟಿಯಾಗಿದ್ದ ಕಾಡಾನೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರತ್ತ ನುಗ್ಗಿದೆ.

ಕಾಫಿ ತೋಟಕ್ಕೆ ತೆರಳುವ ವೇಳೆ ಕಾರ್ಮಿಕರು ತಪ್ಪಿಸಿಕೊಳ್ಳಲು ಓಡಿದ್ದಾರೆ. ಈ ಸಂದರ್ಭದಲ್ಲಿ ಕಾರ್ಮಿಕ ಶ್ರೀಧರ್ ಆನೆ ಬರುತ್ತಿದ್ದ ದಾರಿಯಲ್ಲೇ ಓಡಿದ್ದರಿಂದ ಕಾಡಾನೆ ಆತನ ಮೇಲೆ ದಾಳಿ ಮಾಡಿದ್ದು, ಈ ವೇಳೆ ಕಾರ್ಮಿಕನನ್ನು ತುಳಿದು ಸಾಯಿಸಿದೆ ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ತರಲಾಗಿದೆ. ಈ ವೇಳೆ ಮೃತರ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು.

ಶ್ರೀಧ‌ರ್ ಮೂಲತಃ ತಮಿಳುನಾಡು ಮುಲದವರಾಗಿದ್ದು, ಕೂಲಿ ಕೆಲಸ ಅರಸಿ ಕಾಪಿನಾಡಿಗೆ ಬಂದಿದ್ದಾರೆ. ಕಾಫಿ ತೋಟದ ಲೈನ್ ಮನೆಯಲ್ಲಿ ಪತ್ನಿ ಮಕ್ಕಳೊಂದಿಗೆ ವಾಸವಾಗಿದ್ದ ಕುಟುಂಬದವರು ತಾಲೂಕು ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಕೆಲಸ ಮಾಡಿ ಕೊಂಡಿದ್ದರು. ಮೃತರಿಗೆ ೫ ಮಂದಿ ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳಿದ್ದಾರೆ.

Previous articleಚುನಾವಣಾ ಠೇವಣಿಗೆ 25 ಸಾವಿರ ನೀಡಿದ ಚುರುಮುರಿ ವ್ಯಾಪಾರಿ
Next articleನಟ ಶಿವರಾಜ ಕುಮಾರ್ ವಿರುದ್ಧ ದೂರು