ಝೈದ್ ಖಾನ್ ಹುಟ್ಟು ಹಬ್ಬಕ್ಕೆ ಗ್ಲಿಂಪ್ಸ್ ಗಿಫ್ಟ್
‘ಬನಾರಸ್’ ಹೀರೋ ಝೈದ್ ಖಾನ್, ರಚಿತಾ ರಾಮ್ ಹಾಗೂ ಮಲೈಕಾ ವಸುಪಾಲ್ ನಟನೆಯ ಕಲ್ಟ್ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಸದ್ಯ ಈ ಚಿತ್ರದ ಬಿಗ್ ಅಪ್‌ಡೇಟ್ ಹೊರ ಬಿದ್ದಿದ್ದು, ಕುತೂಹಲ ಗರಿಗೆದರುವಂತೆ ಮಾಡಿದೆ. ಲೋಕಿ ಸಿನಿಮಾಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಇದೀಗ ಕೆವಿಎನ್ ಸಂಸ್ಥೆ ಕಲ್ಟ್ ಸಿನಿಮಾದ ಭಾಗವಾಗಿದೆ. ಟಾಕ್ಸಿಕ್, ಜನ ನಾಯಗನ್ ಸಿನಿಮಾಗಳನ್ನು ನಿರ್ಮಿಸುತ್ತಿರುವ ಕೆವಿಎನ್ ಪ್ರೊಡಕ್ಷನ್ಸ್ ಕಲ್ಟ್ ಸಿನಿಮಾ ಅರ್ಪಿಸುತ್ತಿದೆ.
ಇನ್ನು ಫೆಬ್ರವರಿ 11 ರಂದು ನಾಯಕ ಝೈದ್‌ಖಾನ್ ಹುಟ್ಟು ಹಬ್ಬ. ಅದೇ ದಿನದಂದು ಕಲ್ಟ್ ಚಿತ್ರದ ಗ್ಲಿಂಪ್ಸ್ ರಿಲೀಸ್ ಮಾಡಲಿದೆ ಚಿತ್ರತಂಡ. ಇದೇ ವರ್ಷ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
ಅನಿಲ್ ಕುಮಾರ್ ನಿರ್ದೇಶನವಿರುವ ‘ಕಲ್ಟ್’ ಚಿತ್ರದ ಫಸ್ಟ್‌ಲುಕ್ ಪೋಸ್ಟರ್‌ನಿಂದಲೇ ವೈರಲ್ ಆಗಿತ್ತು. ಇದು ಆಕ್ಷನ್-ರೊಮ್ಯಾಂಟಿಕ್ ಜಾನರ್ ಚಿತ್ರವಾಗಿದ್ದು, ಈ ಪ್ರಾಜೆಕ್ಟ್ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ.
ಝೈದ್ ಖಾನ್ ನಾಯಕರಾಗಿ ನಟಿಸುತ್ತಿರುವ ಎರಡನೇ ಚಿತ್ರ ಇದಾಗಿದ್ದು, ಮಾಸ್ ಹಾಗೂ ರಗಡ್ ಆಗಿ ಮೂಡಿಬರಲಿದೆ ಎಂಬುದು ಸದ್ಯದ ಮಾಹಿತಿ. ಲೋಕಿ ಸಿನಿಮಾಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣವಾಗಲಿದ್ದು, ರಚನೆ ಹಾಗೂ ನಿರ್ದೇಶನವನ್ನು ಅನಿಲ್ ಕುಮಾರ್ ನಿರ್ವಹಿಸಲಿದ್ದಾರೆ. ಜೆ.ಎಸ್.ವಾಲಿ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ಸಂಯೋಜನೆ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.