Home ನಮ್ಮ ಜಿಲ್ಲೆ ಕಲಬುರಗಿ ಕಲಬುರಗಿಯಲ್ಲಿ ಬೆಳ್ಳಂ ಬೆಳ್ಳಗ್ಗೆ ಶೂಟೌಟ್

ಕಲಬುರಗಿಯಲ್ಲಿ ಬೆಳ್ಳಂ ಬೆಳ್ಳಗ್ಗೆ ಶೂಟೌಟ್

0

ಗನ್ ಸಪ್ಲ್ಯೆ ಮಾಡುತ್ತಿದ್ದವನ ಕಾಲಿಗೆ ಗುಂಡು

ಕಲಬುರಗಿ: ಆಳಂದ ತಾಲೂಕಿನ ಖಾನಾಪುರ ಕ್ರಾಸ್ ಬಳಿ ಸೆ.13ರಂದು ನಡೆದಿದ್ದ ವಿಶ್ವನಾಥ್ ಜಮಾದರ್ ಕೊಲೆ ಆರೋಪಿ ಲಕ್ಷ್ಮಣ ಪೂಜಾರಿ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.
ಕೊಲೆ ಕೇಸ್ ನಲ್ಲಿ ಗನ್‌ ರಿಕವರಿ ಸಲುವಾಗಿ ತೆರಳಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದು, ಆಳಂದ ತಾಲೂಕಿನ ಮಾಡ್ಯಾಳ ಬಳಿ ಆತ್ಮರಕ್ಷಣೆಗಾಗಿ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಗ್ರಾಪಂ ಮಾಜಿ ಸದಸ್ಯ ವಿಶ್ವನಾಥ್ ಜಮಾದಾರ್ ಕೊಲೆ‌ ಪ್ರಕರಣದ ಆರೋಪಿ ಲಕ್ಷ್ಮಣ ಪೂಜಾರಿಯ ಬಲಗಾಲಿಗೆ ಪಿಎಸ್ಐ ಇಂದುಮತಿ ಫೈರಿಂಗ್ ಮಾಡಿದ್ದಾರೆ. ಆರೋಪಿ ಲಕ್ಷ್ಮಣ್ ಪೂಜಾರಿ ಮೇಲೆ 11 ಪ್ರಕರಣಗಳು ದಾಖಲಾಗಿವೆ. ಬೆಂಗಳೂರು , ಕಲಬುರಗಿಯಲ್ಲಿ ಗನ್ ಸಪ್ಲೈ ಮಾಡ್ತಿದ್ದ ಆರೋಪ ಲಕ್ಷ್ಮಣ್ ಪೂಜಾರಿ ಅವರ ಮೇಲಿದೆ.
ಗನ್ ಸಪ್ಲೈ , 307 ಸೇರಿ ಹಲವು ಕೇಸ್ ಗಳು ದಾಖಲಾಗಿವೆ. ಗಾಯಾಳು ಆರೋಪಿ ಲಕ್ಷ್ಮಣ್ ಪೂಜಾರಿ ನಗರದ ಜಿಮ್ಸ್ ಆಸ್ಪತ್ರೆ ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗಿದೆ. ಗಾಯಾಳು ನಿಂಬರ್ಗಾ ಠಾಣೆ ಪಿಎಸ್‌ಐ ಇಂದುಮತಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಳಂದ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version