ಕರ್ಮಗಳೆಲ್ಲ ನಿಮ್ಮ ಮುಖಕ್ಕೇ ರಾಚದಿದ್ದರೆ ಹೇಳಿ!

0
17

ಪಕ್ಷದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲದ ಪರಿಸ್ಥಿತಿ ನಿಮಗೆ ಹೀಗೆಲ್ಲ ಮಾತಾಡಿಸುತ್ತಿದೆ‌ ಎಂಬುದು ನಮಗೂ ಅರ್ಥವಾಗುತ್ತದೆ!

ಬೆಂಗಳೂರು: ಕಾರ್ಮಿಕರ ಕಲ್ಯಾಣ ನಿಧಿ ಬಳಕೆಯ ಬಗ್ಗೆ ವೃತಾ ಆರೋಪ ಮಾಡುತ್ತಿರುವ ವಿರೋಧ ಪಕ್ಷದ ನಾಯಕರಾದ ಆರ್‌ ಅಸೋಕ ಅವರೇ ನೀವು ಇನ್ನೂ ನಿದ್ದೆಯಿಂದ ಎದ್ದಂತೆ ಕಾಣುತ್ತಿಲ್ಲ! ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಸ್ವಲ್ಪ ನಿದ್ದೆಯಿಂದ ಎದ್ದು ಕೇಳಿಸಿಕೊಳ್ಳಿ, ಕಳೆದ ಸಲ ನಿಮ್ಮದೇ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಮಾಡಿಹೋದ ಎಡವಟ್ಟುಗಳನ್ನು ನಾವು ಆಡಿಟ್ ಮಾಡಿಸಿದಾಗ ಬಯಲಾದ ಸಂಗತಿಗಳನ್ನೇ ಘನ ನ್ಯಾಯಪೀಠ ಪುನರುಚ್ಛರಿಸಿದೆ ಹೊರತು ಮತ್ತೇನಿಲ್ಲ! ಮಂಡಳಿಯ ನಿಧಿಯಲ್ಲಿ ಕಾರುಗಳನ್ನು ಖರೀದಿ ಮಾಡಿದ್ದು ನಮ್ಮ ಸರ್ಕಾರ ಅಲ್ಲ ಸ್ವಾಮಿ, ನಿಮ್ಮದೇ ಬಿಜೆಪಿ ಸರ್ಕಾರ‌! ಕೋವಿಡ್ ಸಮಯದಲ್ಲಿ ಇಂದಿರಾ ಕ್ಯಾಂಟೀನ್ ಗಳಿಗೆ ಮಂಡಳಿಯ ಹಣ ವೆಚ್ಚ ಮಾಡಿದ್ದು ಸಹ ನೀವೇ. ಯಾಕೆಂದರೆ ಆಗ ಅಧಿಕಾರದಲ್ಲಿದ್ದಿದ್ದು ನಿಮ್ಮದೇ ಬಿಜೆಪಿ ಸರ್ಕಾರ ಅಲ್ಲವೇ? ನರೇಗಾ ಯೋಜನೆಗೆ ಮಂಡಳಿಯ ನಿಧಿ ಬಳಕೆ ಮಾಡಿಕೊಳ್ಳಿ ಎಂದು ಅಧಿಸೂಚನೆ ಹೊರಡಿಸಿದ್ದು ಸಹ ತಮ್ಮದೇ ಕೇಂದ್ರ ಬಿಜೆಪಿ ಸರ್ಕಾರ ಎಂಬುದು ತಮಗೆ ತಿಳಿದಿಲ್ಲವೇ? ಇನ್ನು ಕಳೆದ ಅವಧಿಯ ನಿಮ್ಮ ಸರ್ಕಾರದಲ್ಲಿ ಕಾರ್ಮಿಕರಲ್ಲದವರಿಗೆಲ್ಲ ಕಾರ್ಮಿಕ ಕಾರ್ಡ್ ಗಳನ್ನು ಮಾಡಿಕೊಟ್ಟು ಕಾರ್ಮಿಕರ ಕಲ್ಯಾಣ ನಿಧಿಯನ್ನು ನುಂಗಿದ್ದು ಮರೆತು ಹೋದಿರಾ ಆರ್ ಅಶೋಕ್ ಅವರೇ? ಅಧಿಕಾರ ಕಳೆದುಕೊಂಡ ಹತಾಶೆ, ಪಕ್ಷದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲದ ಪರಿಸ್ಥಿತಿ ನಿಮಗೆ ಹೀಗೆಲ್ಲ ಮಾತಾಡಿಸುತ್ತಿದೆ‌ ಎಂಬುದು ನಮಗೂ ಅರ್ಥವಾಗುತ್ತದೆ! ದಯವಿಟ್ಟು ನ್ಯಾಯ ಪೀಠ ಹೇಳಿರುವ ಅಂಶಗಳನ್ನೊಮ್ಮೆ ಓದಿಕೊಳ್ಳಿ. ಆಗ ನಿಮ್ಮದೇ ಬಿಜೆಪಿ ಸರ್ಕಾರ ಮಾಡಿಹೋದ ಕರ್ಮಗಳೆಲ್ಲ ನಿಮ್ಮ ಮುಖಕ್ಕೇ ರಾಚದಿದ್ದರೆ ಹೇಳಿ! ಎಂದಿದ್ದಾರೆ.

Previous articleಜಾತ್ರೋತ್ಸವ ಸಂತೆ: ಸ್ಥಳೀಯ ವ್ಯಾಪಾರಿಗಳಿಗೆ ನೀಡಲು ಆಗ್ರಹ
Next articleಪರೀಕ್ಷೆಗೂ ಮುನ್ನ ಮೂಗಬೊಟ್ಟಿಗೆ ಕತ್ತರಿ..!