ಕರ್ನಾಟಕದ ಹೆಮ್ಮೆಯ ಸ್ನೂಕರ್ ಪಂಕಜ್ ಅಡ್ವಾಣಿ

0
12

ದೋಹಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತದವರೇ ಆದ ಸೌರವ್ ಕೊಥಾರಿ ಅವರನ್ನು ಮಣಿಸುವ ಮೂಲಕ ಭಾರತದ ಕ್ಯೂಯೆಸ್ಟ್ ಪಂಕಜ್ ಅಡ್ವಾಣಿ ಐಬಿಎಸ್‌ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ದಾಖಲೆಯ 26ನೇ ಬಾರಿಗೆ ಮುಡಿಗೇರಿಸಿಕೊಂಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಚಿವ ಎಂ.ಬಿ ಪಾಟೀಲ್ ಅಭಿನಂದಿಸಿ ಪೋಸ್ಟ್‌ ಮಾಡಿದ್ದಾರೆ. “ಕರ್ನಾಟಕದ ಹೆಮ್ಮೆಯ ಸ್ನೂಕರ್ ಆಟಗಾರರಾದ ಪಂಕಜ್ ಅಡ್ವಾಣಿ ಅವರು ಮಂಗಳವಾರ ದೋಹಾದಲ್ಲಿ ನಡೆದ, ಐಬಿಎಸ್‌ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಬಿಲಿಯರ್ಡ್ಸ್ ಮತ್ತು ಸ್ನೂಕರ್ ನಲ್ಲಿ ಅವರು ಗೆದ್ದ 26ನೇ ವಿಶ್ವ ಕಿರೀಟವಿದು. ಅಸಾಧಾರಣ ಸಾಧನೆಯ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದು, ಹೃತ್ಪೂರ್ವಕ ಅಭಿನಂದನೆಗಳು. ಅವರ ಈ ಸಾಧನೆ ನಮ್ಮೆಲ್ಲ ಯುವ ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಿದೆ ಎಂದು ಬರೆದುಕೊಂಡಿದ್ದಾರೆ.

Previous articleಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ
Next articleಅಪಘಾತ ಪಡಿಸಿದ ಶ್ವಾನದ ಪಶ್ಚಾತಾಪಕ್ಕೆ ಜನರು ನಿಬ್ಬೆರಗು!