ಕರ್ನಾಟಕದಲ್ಲಿ ಲ್ಯಾಪ್‌ಟಾಪ್ ತಯಾರಿಕಾ ಘಟಕ

0
121

ಕರ್ನಾಟಕದಲ್ಲಿ 1,500 ಕೋಟಿ ಹೂಡಿಕೆ: 3 ಸಾವಿರಕ್ಕೂ ಅಧಿಕ ಉದ್ಯೋಗ

ಬೆಂಗಳೂರು: ಕರ್ನಾಟಕದಲ್ಲಿ 1,500 ಕೋಟಿ ಹೂಡಿಕೆಯ ನೂತನ ಲ್ಯಾಪ್‌ಟಾಪ್ ತಯಾರಿಕಾ ಘಟಕ ಆರಂಭಗೊಳ್ಳುತ್ತಿದೆ ಎಂದು ಕೈಗಾರಿಕೆ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ದೇವನಹಳ್ಳಿಯಲ್ಲಿ ‘ವಿಸ್ಟ್ರಾನ್’ ಲ್ಯಾಪ್‌ಟಾಪ್ ತಯಾರಿಕಾ ಘಟಕ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ದೇವನಹಳ್ಳಿಯಲ್ಲಿ ವಿಸ್ಟ್ರಾನ್ ಕಂಪನಿಯ ನೂತನ ಲ್ಯಾಪ್‌ಟಾಪ್ ತಯಾರಿಕಾ ಘಟಕ ಆರಂಭಗೊಳ್ಳುತ್ತಿದೆ. ₹1,500 ಕೋಟಿ ಹೂಡಿಕೆಯ ಈ ಯೋಜನೆಯು 3 ಸಾವಿರಕ್ಕೂ ಅಧಿಕ ಉದ್ಯೋಗಗಳನ್ನು ಸೃಷ್ಟಿಸಲಿದೆ. ಈ ತಯಾರಿಕಾ ಘಟಕದ ನಿರ್ಮಾಣಕ್ಕಾಗಿ #ವಿಸ್ಟ್ರಾನ್ ಇತ್ತೀಚೆಗೆ ಶಾಪೂರ್ಜಿ ಪಲ್ಲೊಂಜಿ ಸಂಸ್ಥೆಯೊಂದಿಗೆ ನಿರ್ಮಾಣ ಒಪ್ಪಂದಕ್ಕೆ ಸಹಿ ಹಾಕಿದೆ. 2026ರ ಜನವರಿ ವೇಳೆಗೆ ಲ್ಯಾಪ್‌ಟಾಪ್ ತಯಾರಿಕೆ ಆರಂಭಿಸುವ ಗುರಿ ಹೊಂದಿದೆ. #ನಮ್ಮಸರ್ಕಾರ ಕೈಗಾರಿಕೆ ಅಭಿವೃದ್ಧಿಗೆ ನೀಡಿರುವ ವಿಶ್ವ ದರ್ಜೆಯ ಮೂಲಸೌಕರ್ಯ ಮತ್ತು ಹೂಡಿಕೆ ಸ್ನೇಹಿ ನೀತಿಗಳು ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸುತ್ತಲೇ ಇದ್ದು ಎಲೆಕ್ಟ್ರಾನಿಕ್ಸ್ ಹಬ್ ಆಗಿ ನಮ್ಮ ಕರ್ನಾಟಕದ ಸ್ಥಾನ ಭದ್ರವಾಗಿದೆ ಎಂದಿದ್ದಾರೆ.

Previous articleಅನೌಪಚಾರಿಕತೆ
Next articleಬ್ಯಾಕ್ ಲಾಗ್ ಹುದ್ದೆಗಳ ನೇಮಕಾತಿಗಾಗಿ ತಡೆ