“ಕರಟಕ ದಮನಕ” ಮೊದಲ ಹಾಡಿನ ಧಮಾಕ..!

0
14

ಯೋಗರಾಜ್‌ ಭಟ್‌ ಸಾಹಿತ್ಯ ಮತ್ತು ನಿರ್ದೇಶನದ ಕರಟಕ ದಮನಕ ಸಿನಿಮಾದ ಟೈಟಲ್‌ ಟ್ರ್ಯಾಕ್‌ ಬಿಡುಗಡೆಯಾಗಿದೆ.
ಶಿವರಾಜಕುಮಾರ್ ಮತ್ತು ಪ್ರಭುದೇವ ನಟನೆಯ ಕರಟಕ-ದಮನಕ ಸಿನಿಮಾ ಮಾರ್ಚ್ 8 ರಂದು ಶಿವರಾತ್ರಿಯ ಹಬ್ಬದ ಸಂಭ್ರಮಾಚರಣೆಯೊಂದಿಗೆ ಥಿಯೇಟರ್‌ಗೆ ಬರಲಿದೆ, ಶಿವರಾಜ್‌ ಕುಮಾರ್‌ ಇಲ್ಲಿ ಕರಟಕನಾಗಿ ಪ್ರಭುದೇವ್‌ ದಮನಕನಾಗಿ ಕಾಣಿಸಿಕೊಂಡಿದ್ದಾರೆ. ಶಿವರಾಜ್‌ ಕುಮಾರ್‌ ಮತ್ತು ಪ್ರಭುದೇವರಿಗೆ ಜೋಡಿಯಾಗಿ ನಿಶ್ವಿಕಾ ನಾಯ್ಡು ಮತ್ತು ಪ್ರಿಯಾ ಆನಂದ್‌ ನಟಿಸುತ್ತಿದ್ದಾರೆ. ರಾಕ್‌ಲೈನ್‌ ವೆಂಕಟೇಶ್‌ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಮುಖ್ಯಮಂತ್ರಿ ಚಂದ್ರು, ದೊಡ್ಡಣ್ಣ, ರಂಗಾಯಣ ರಘು, ರವಿ ಶಂಕರ್‌, ಭರಣಿ ಮುಂತಾದ ಪ್ರಮುಖ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.ಈ ಚಿತ್ರಕ್ಕೆ ಹರಿಕೃಷ್ಣ ಸಂಗೀತವಿದೆ. ಭಟ್ಟರ ಸಾಹಿತ್ಯ, ಶಂಕರ್ ಮಹಾದೇವನ್ ಗಾಯನ ಸೊಗಸಾದ ಹಾಡಿನ ಮೂಲಕ ಇಬ್ಬರು ನಾಯಕರ ಕ್ಯಾರೆಕ್ಟರ್ ಪರಿಚಯ ಮಾಡಿಸಿದೆ.
ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ನಿರ್ದೇಶಕ ಯೋಗರಾಜ್ ಭಟ್ರು ಪೋಸ್ಟ್‌ ಒಂದನ್ನು ಮಾಡಿದ್ದು ‘ಒಂದಾನೊಂದು ಕಾಲದಲ್ಲಿ ಎರಡು ಕುತಂತ್ರಿ ನರಿಗಳಿದ್ದವು. ಒಂದರ ಹೆಸರು ‘ಕರಟಕ’ ಇನ್ನೊಂದರ ಹೆಸರು ‘ದಮನಕ’. ಈ ಎರಡೂ ನರಿಗಳು ಕಾಡು ಮತ್ತು ನಾಡಿನ ತಲೆ ಕೆಡಿಸಿ ಇತಿಹಾಸವಾದವು. ಆ ಕುತಂತ್ರಿ ನರಿಗಳು ಇಂದು ಇಲ್ಲಿ ಮಾನವ ರೂಪ ತಾಳಿವೆ!!ಎಚ್ಚರಿಕೆ’ ಎಂದಿದ್ದರು, ಈಗ ಬಿಡುಗಡೆಯಾಗಿರುವ ಕರಟಕ ದಮನಕ ಸಿನಿಮಾದ ಟೈಟಲ್‌ ಟ್ರ್ಯಾಕ್‌ನಲ್ಲಿ ಇಬ್ಬರು ನರಿಗಳ ಪಂಚತಂತ್ರದ ಕಥೆಯ ಝಲಕ್‌ ಇದೆ.

ಬಹುನಿರೀಕ್ಷಿತ “ಕರಟಕ ದಮನಕ” ಚಿತ್ರದ ಟೈಟಲ್ ಟ್ರ್ಯಾಕ್ ನಿಮಗಾಗಿ….

Previous articleಹನುಮಾನ್ ಜಪ ರಾಜಕೀಯ ತಾಪ
Next articleವೈಷಮ್ಯ ಹೆಚ್ಚಿಸುವ ಕೆಲಸವಾಗಬಾರದು