ಒಂದೊಂದು ಕೆಲಸಕ್ಕೆ ಒಂದೊಂದು ಸಾಫ್ಟವೆರ್…

0
76

ವಿಷಯ ತಜ್ಞರ ಸಲಹೆ, ಸೂಚನೆ ಪಡೆದು ಒಂದೇ ಸಾಫ್ಟವೆರ್ ಅನ್ನು ತಯಾರಿಸಿ ಅದರಲ್ಲೇ ಎಲ್ಲಾ ಸೇವೆ ಸಿಗುವಂತೆ ಮಾಡಲಿ

ಬೆಂಗಳೂರು: ಒಂದೊಂದು ಕೆಲಸಕ್ಕೆ ಒಂದೊಂದು ಸಾಫ್ಟವೆರ್ ಬಳಸುವ ಔಚಿತ್ಯವೇನು ಎಂದು ರಾಜ್ಯ ಸರ್ಕಾರ ತಿಳಿಸಬೇಕು. ಇದರಿಂದ ಕೆಲಸ ಹೆಚ್ಚಿಗೆ ಆಗಿ, ಇಲಾಖೆಯೇ ಉತ್ಪಾದಕತೆ ಕಡಿಮೆಯಾಗುತ್ತೆ. ಸಾಫ್ಟವೆರ್ ಗಳನ್ನು integrate ಮಾಡಿ ಕೇಂದ್ರೀಕೃತ ಮಾಡಿದರೆ ಸರ್ಕಾರಕ್ಕೂ ಅನುಕೂಲ, ಸಾರ್ವಜನಿಕರಿಗೂ ಅನುಕೂಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಸರ್ಕಾರದ ಅಮೂಲ್ಯವಾದ ಸಮಯವನ್ನು ಉಳಿತಾಯ ಮಾಡಿ ಉತ್ಪಾದಕತೆ ಹಾಗೂ ಉತ್ತರಾಯದಿತ್ವವನ್ನು ಹೆಚ್ಚಿಸಬಹುದು. ಸರ್ಕಾರ ವಿಷಯ ತಜ್ಞರ ಸಲಹೆ, ಸೂಚನೆ ಪಡೆದು ಒಂದೇ ಸಾಫ್ಟವೆರ್ ಅನ್ನು ತಯಾರಿಸಿ ಅದರಲ್ಲೇ ಎಲ್ಲಾ ಸೇವೆ ಸಿಗುವಂತೆ ಮಾಡಲಿ, ಹಾಗೆಯೇ, ಕಂದಾಯ ಕಚೇರಿಗಳಲ್ಲಿ ಪದೇ ಪದೇ ಸರ್ವರ್ ಸಮಸ್ಯೆಯನ್ನು ಸರ್ಕಾರ ಸರಿಪಡಿಸಬೇಕು. ತಮ್ಮ ಹೊಲ-ಗದ್ದೆಗಳ ಕೆಲಸಗಳನ್ನು ಬಿಟ್ಟು ರೈತರು, ಜನ ಸಾಮಾನ್ಯರು ಕಂದಾಯ ಕಚೇರಿಗೆ ಬಂದು ಅಲ್ಲಿ ಸರ್ವರ್ ಸಮಸ್ಯೆ ಇದೆ ಎಂದು ಹಿಂದಿರುಗುವುದು ಸರ್ಕಾರದ ಅಸಮರ್ಥತೆ, ಅದಕ್ಷತೆಗೆ ಹಿಡಿದ ಕೈಗನ್ನಡಿಯಾಗಿದೆ. ಸರ್ವರ್ ಗಳನ್ನು ಕೂಡಲೇ ಮೇಲ್ದರ್ಜೆ [upgrade] ಮಾಡುವ ಕೆಲಸ ಆಗಲಿ ಎಂದಿದ್ದಾರೆ.

Previous articleದೇವಸ್ಥಾನ ಕಳಸಾರೋಹಣ ವೇಳೆ ಅವಘಡ:  ವ್ಯಕ್ತಿ ಸಾವು
Next articleಕರ್ನಾಟಕ ವೈಭವಕ್ಕೆ ಉಪರಾಷ್ಟ್ರಪತಿಯಿಂದ ಚಾಲನೆ