ಐವನ್ ಡಿಸೋಜ ವಿರುದ್ಧ FIR ದಾಖಲಿಸಲು ಆಗ್ರಹ

0
8

ಬೆಂಗಳೂರು: ಐವನ್ ಡಿಸೋಜ ಅವರ ವಿರುದ್ಧ FIR ದಾಖಲಿಸಬೇಕೆಂದು ಆಗ್ರಹಿಸುತ್ತೇನೆ ಎಂದು ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.


ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರುಗಳಾದ ಹರೀಶ್ ಪೂಂಜ, ಡಾ. ಭರತ್ ಶೆಟ್ಟಿಯವರು ಪ್ರತಿಭಟನೆಯ ಸಂದರ್ಭಗಳಲ್ಲಿ ನೀಡಿದ ಹೇಳಿಕೆಗಳನ್ನು ಆಧರಿಸಿ ತಕ್ಷಣ FIR ದಾಖಲಿಸುವ ಪೊಲೀಸ್ ಇಲಾಖೆ ಅದೇ ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರ ಬಗ್ಗೆ ಕೀಳುಮಟ್ಟದ ಮಾತುಗಳನ್ನು ಆಡಿರುವ ಐವನ್ ಡಿಸೋಜಾ ಅವರ ಬಗ್ಗೆ ದೂರು ನೀಡಿದರೂ FIR ದಾಖಲಿಸಲು ದಿನಗಟ್ಟಲೇ ಮೀನಾಮೇಷ ಎಣಿಸುವುದು ನೋಡಿದಾಗ ಪೊಲೀಸರ ಮೇಲೆ ರಾಜ್ಯ ಸರಕಾರದ ಒತ್ತಡ ಯಾವ ಮಟ್ಟಕ್ಕಿರಬಹುದು ಎನ್ನುವುದು ಅರ್ಥವಾಗುತ್ತದೆ ಎಂದಿದ್ದಾರೆ.

Previous articleರಾಯರ ಆರಾಧನೆಯಲ್ಲಿ ಯದುವೀರ್ ಒಡೆಯರ್ ಭಾಗಿ
Next articleಬ್ರಹ್ಮಾಂಡ ಭ್ರಷ್ಟಾಚಾರ ಪುರಾಣದ ಮೊದಲ ಅಧ್ಯಾಯ ಪ್ರಕಟವಾಗಿದೆ