‘ಏರ್ ಶೋ ಏರೋ ಇಂಡಿಯಾದ ಮಹಾಕುಂಭವಾಗಿದೆ, ಪ್ರಯಾಗ್ರಾಜ್ಮಹಾಕುಂಭ ಸಂಸ್ಕೃತಿಯ ಮಹಾಕುಂಭವಾಗಿದ್ರೆ, ಬೆಂಗಳೂರಿನಲ್ಲಿ ನಡೆಯುತ್ತಿರುವ ಏರ್ ಶೋ ಶಕ್ತಿಯ ಮಹಾಕುಂಭವಾಗಿದೆ,
ಬೆಂಗಳೂರು: ‘ಏರೋ ಇಂಡಿಯಾ 2025’ ಏರ್ ಶೋ ರಕ್ಷಣಾ ಸಚಿವ ರಾಜನಾಥ ಸಿಂಗ್ ಅಧಿಕೃತ ಚಾಲನೆ ನೀಡಿದ್ದಾರೆ.
ಏಷ್ಯಾದಲ್ಲೇ ಅತ್ಯಂತ ದೊಡ್ಡ ಏರ್ ಶೋ ಎಂಬ ಹೆಗ್ಗಳಿಕೆಗೆ ಪಾತ್ರವಾದ. ಬೆಂಗಳೂರಿನ ಯಲಹಂಕದಲ್ಲಿ ನಡೆಯುತ್ತಿದ್ದು, ಇಂದಿನಿಂದ 4 ದಿನಗಳ ಕಾಲ ವೈಮಾನಿಕ ಪ್ರದರ್ಶನ ನಡೆಯಲಿದೆ. ‘‘ರನ್ವೇ ಟು ಬಿಲಿಯನ್ ಅಪಾರ್ಚುನಿಟಿಸಿ’’ ಟ್ಯಾಗ್ ಲೈನ್ನಲ್ಲಿ ಏರ್ಶೋ-2025 ಆಯೋಜಿಸಲಾಗಿದೆ. 100 ದೇಶಗಳ 900ಕ್ಕೂ ಹೆಚ್ಚು ರಕ್ಷಣಾ ಸಾಮಗ್ರಿ ಉತ್ಪಾದಕರು ಭಾಗವಹಿಸಲಿದ್ದಾರೆ. ವಿವಿಧ ಕಂಪನಿಗಳ 100 ಸಿಇಒಗಳು, 50 ವಿದೇಶಿ ಒಎಂಎಸ್ ಉಪಸ್ಥಿತರಿರಲಿದ್ದಾರೆ. ಎಐ, ಸೈಬರ್ ಸೆಕ್ಯುರಿಟಿ, ಡ್ರೋನ್ ಮತ್ತು ಗ್ಲೋಬಲ್ ಏರೋಸ್ಪೇಸ್ ಪ್ರದರ್ಶನವಿದೆ. ಆತ್ಮನಿರ್ಭರ ಭಾರತದ ಉತ್ಪನ್ನಗಳು ಇರಲಿದ್ದು 10 ಸೆಮಿನಾರ್ಗಳು ಆಯೋಜಿಸಲಾಗಿದೆ. ರಕ್ಷಣಾ ವಲಯದಲ್ಲಿ ಹೂಡಿಕೆ, ಸಂಶೋಧನೆ, ಜಾಯಿಂಟ್ ವೆಂಚರ್, ರಕ್ಷಣಾ ವಲಯ ಬಗ್ಗೆ ಚರ್ಚೆ ಆಗಲಿದೆ, ‘ಏರೋ ಇಂಡಿಯಾ 2025’ಗೆ ಅಧಿಕೃತ ಚಾಲನೆ ನೀಡಿದ ಬಳಿಕ ಮಾತನಾಡಿದ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು, ಅಲ್ಲಿ ಮಹಾಕುಂಭ ಮೇಳ ನಡೆಯುತ್ತಿದೆ. ಇಲ್ಲಿ ಏರೋ ಇಂಡಿಯಾ ಮಹಾಕುಂಭ ನಡೆಯುತ್ತಿದೆ. ಒಂದು ಕಡೆ ಪರಂಪರೆ, ಸಂಸ್ಕೃತಿಯ ಮಹಾಕುಂಭ ಆಗುತ್ತಿದೆ. ಇನ್ನೊಂದು ಕಡೆ ಅತ್ಯಾಧುನಿಕ, ತಂತ್ರಜ್ಞಾನದ ಯುದ್ದೋಪಕರಣ, ವಿಮಾನಗಳಗಳ ಮಹಾಕುಂಭ ನಡೆಯುತ್ತಿದೆ ಎಂದಿದ್ದಾರೆ.