ಏಪ್ರಿಲ್ 7 ರಿಂದ ರಾಜ್ಯಾದ್ಯಂತ ಜನಾಕ್ರೋಶ ಹೋರಾಟ

0
22

24 ಗಂಟೆಗಳ ಅಹೋ ರಾತ್ರಿ ಧರಣಿ ಸತ್ಯಾಗ್ರಹ’ ಸಂಪನ್ನ

ಬೆಂಗಳೂರು: ಏಪ್ರಿಲ್ 7 ರಿಂದ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಜನಾಕ್ರೋಶ ಹೋರಾಟದ ಯಶಸ್ವಿಗೆ ಸರ್ವರ ಸಹಕಾರ ನಿರೀಕ್ಷಿಸುವದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.
ಅವರು ಇಂದು ಅಹೋ ರಾತ್ರಿ ಧರಣಿ ಸತ್ಯಾಗ್ರಹ ಹೋರಾಟದ ಯಶಸ್ಸಿನಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಶ್ರಮಿಸಿದ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಕಾಂಗ್ರೆಸ್ ಸರ್ಕಾರದ ದುರಾಡಳಿತ, ಜನಸಾಮಾನ್ಯರನ್ನು ಶೋಷಿಸುವ ಪರಿಯಲ್ಲಿ ನಿರಂತರ ಬೆಲೆ ಏರಿಕೆಯ ವಿರುದ್ಧ ‘ಬಿಜೆಪಿ-ಕರ್ನಾಟಕ’ಸಂಘಟಿಸಿದ್ದ ‘24 ಗಂಟೆಗಳ ಅಹೋ ರಾತ್ರಿ ಧರಣಿ ಸತ್ಯಾಗ್ರಹ’ ಸಂಪನ್ನಗೊಂಡು ರಾಜ್ಯದ ಜನರ ಗಮನಸೆಳೆಯುವಲ್ಲಿ ಸಫಲವಾಗಿ ,ಹೋರಾಟ ಅತ್ಯಂತ ಯಶಸ್ವಿಯಾಗಲು ಕಾರಣೀಕರ್ತರಾದ, ವಿರೋಧ ಪಕ್ಷದ ಉಭಯ ಸದನಗಳ ನಾಯಕರು, ಪಕ್ಷದ ಪ್ರಮುಖರು ಶಾಸಕರು, ಮಾಜಿ ಶಾಸಕರು, ರಾಜ್ಯ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು,ಜಿಲ್ಲಾ ಹಾಗೂ ಮಂಡಲಗಳ ಅಧ್ಯಕ್ಷರು, ಪದಾಧಿಕಾರಿಗಳಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದನಾಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುವೆ.

ಸಂಘಟನಾ ಬದ್ಧತೆಯ ಕಾರ್ಯಕರ್ತರಿಗೆ ಅತ್ಯಂತ ಪ್ರೇರಣಾ ಶಕ್ತಿಯಾಗಿ ಇಡೀ ದಿನ ಧರಣಿಯಲ್ಲಿ ಭಾಗವಹಿಸಿ ಉತ್ಸಾಹದ ಮಾತುಗಳನ್ನು ಆಡುವ ಮೂಲಕ ಹೋರಾಟದಿಂದ ಮೇಲೆದ್ದು ಬಂದ ತಮ್ಮ ಹೋರಾಟದ ಛಲ ಇಂದಿಗೂ ಕುಗ್ಗಿಲ್ಲ ಎಂಬ ಸಂದೇಶ ರವಾನಿಸಿದ ಮಾಜಿ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಅವರಿಗೆ ಪಕ್ಷವು ವಿಶೇಷ ಅಭಿನಂದನೆ ಸಲ್ಲಿಸುತ್ತದೆ.

ಅಹೋರಾತ್ರಿ ಧರಣಿಯ ಸಂಪೂರ್ಣ ಮಾಹಿತಿಯನ್ನು ಪ್ರಾರಂಭದಿಂದ ಕೊನೆಯ ಕ್ಷಣದವರೆಗೂ ವರದಿ ಮಾಡುವ ಮೂಲಕ ಕೋಟ್ಯಂತರ ಜನರಿಗೆ ನಮ್ಮ ಹೋರಾಟದ ಸಂದೇಶ ತಲುಪಲು ಕಾರಣಕರ್ತರಾದ ಮಾಧ್ಯಮ ಬಂಧುಗಳಿಗೂ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುವೆ. ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಂಡ ಈ ಧರಣಿಯ ಸಂದರ್ಭದಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಗೂ ಧನ್ಯವಾದಗಳು. ಹೋರಾಟದ ಯಶಸ್ಸಿನಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಶ್ರಮಿಸಿದ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸಬಯಸುವೆ ಬಿಜೆಪಿ ಕರ್ನಾಟಕ ಹಮ್ಮಿಕೊಂಡಿರುವ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ,ಬೆಲೆ ಏರಿಕೆ ಹಾಗೂ ಸಂವಿಧಾನ ಆಶಯಕ್ಕೆ ವಿರುದ್ಧವಾಗಿ ಮುಸ್ಲಿಂ ಮೀಸಲಾತಿ, ಪರಿಶಿಷ್ಟ ಹಾಗೂ ಹಿಂದುಳಿದ ಸಮುದಾಯಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಹಿನ್ನಡೆ ಉಂಟಾಗಿರುವುದರ ವಿರುದ್ಧ ಏಪ್ರಿಲ್ 7 ರಿಂದ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಜನಾಕ್ರೋಶ ಹೋರಾಟದ ಯಶಸ್ವಿಗೆ ಇದೇ ರೀತಿಯ ಸಹಕಾರವನ್ನು ಸರ್ವರಿಂದಲೂ ನಿರೀಕ್ಷಿಸುವೆ ಎಂದಿದ್ದಾರೆ.

Previous articleಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪಿಸಲು ತೀರ್ಮಾನ
Next articleಅಪಘಾತದಲ್ಲಿ ನಾಲ್ವರು ಸಾವು: ಸ್ಥಳಕ್ಕೆ ಡಿಐಜಿಪಿ ಬೋರಲಿಂಗಯ್ಯ ಭೇಟಿ