ಏಪ್ರಿಲ್ 10ಕ್ಕೆ ‘ವಾಮನ’ ಆಗಮನ

0
17

ಧನ್ವೀರ್ ದರ್ಶನಕ್ಕೆ ಮುಹೂರ್ತ ಫಿಕ್ಸ್

ಧನ್ವೀರ್ ನಟನೆಯ ‘ವಾಮನ’ ಚಿತ್ರದ ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ. ಈಗಾಗಲೇ ಇಂಟ್ರೊಡಕ್ಷನ್ ಹಾಡು, ಮುದ್ದು ರಾಕ್ಷಸಿ ಹಾಡುಗಳು ಹಾಗೂ ಟೀಸರ್ ಹಿಟ್ ಆಗಿವೆ. ಮಿಲಿಯನ್‌ಗೂ ಅಧಿಕ ಹಿಟ್ಸ್ ದಾಖಲಿಸಿರುವ ಎಲ್ಲಾ ಹಾಡಿಗೆ ಚಿತ್ರತಂಡ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಇದೀಗ ಸಿನಿಮಾವನ್ನು ಬಿಡುಗಡೆ ಮಾಡಲು ಅಣಿಯಾಗಿದೆ ಟೀಂ ವಾಮನ. ಏಪ್ರಿಲ್ 10 ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.

ಶಂಕರ್ ರಾಮನ್ ಚೊಚ್ಚಲ ನಿರ್ದೇಶನವಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಗೆ ನಿರ್ದೇಶಕರೇ ಪೆನ್ನು ಹಿಡಿದಿದ್ದಾರೆ. ಈಕ್ವಿನಾಕ್ಸ್ ಗ್ಲೋಬಲ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಚೇತನ್ ಗೌಡ ‘ವಾಮನ’ನಿಗೆ ಬಂಡವಾಳ ಹೂಡಿದ್ದಾರೆ.

ಧನ್ವೀರ್ ಜೋಡಿಯಾಗಿ ‘ಏಕ್‌ಲವ್‌ಯಾ’, ‘ಯುಐ’ ಖ್ಯಾತಿಯ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಪಕ್ಕಾ ಮಾಸ್ ಹಾಗೂ ಕ್ಲಾಸ್ ಅಂಶಗಳಿರುವ ಈ ಚಿತ್ರದ ಉಳಿದ ತಾರಾಗಣದಲ್ಲಿ ತಾರಾ, ಸಂಪತ್ ರಾಜ್, ಆದಿತ್ಯ ಮೆನನ್, ಅವಿನಾಶ್, ಅಚ್ಯುತ್ ಕುಮಾರ್, ಪೆಟ್ರೋಲ್ ಪ್ರಸನ್ನ, ಶಿವರಾಜ್ ಕೆ ಆರ್ ಪೇಟೆ, ಕಾಕ್ರೋಚ್ ಸುಧಿ ಮೊದಲಾದವರು ಅಭಿನಯಿಸಿದ್ದಾರೆ.

ಡಾ. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ, ಅಜನೀಶ್ ಲೋಕನಾಥ್ ಸಂಗೀತ, ಭೂಷಣ್ ಕೊರಿಯೋಗ್ರಫಿ, ಮಹೇಂದ್ರ ಸಿಂಹ ಛಾಯಾಗ್ರಹಣವಿದೆ.

Previous articleಕಲ್ಯಾಣ ಕರ್ನಾಟಕ ವಿಷಯದಲ್ಲಿ ಮೌನವಾಗಿರುವುದೇಕೆ?
Next articleಹೊಯ್ಸಳ ವಿಜಯ್ ಹೊಸ ಚಿತ್ರ ಶುರು