ಎಸ್‌ಪಿ ವಿರುದ್ಧ ಒಬ್ಬ ಕಾನ್ಸ್ಟೇಬಲ್ ತನಿಖೆ ಮಾಡಿದಂತೆ

0
15

ಚಿಕ್ಕಮಗಳೂರು: ಮೈಸೂರು ಮೂಡದ ಸಾವಿರಾರು ಕೋಟಿ ರೂ ಅಕ್ರಮಕ್ಕೆ ಸಂಬಂಧಪಟ್ಟಂತೆ ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಒತ್ತಾಯಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್‌ಐಟಿ ತನಿಖೆ ನಡೆಸುವುದಾಗಿ ಸಿಎಂ ಹೇಳಿದ್ದಾರೆ. ಆದರೆ ಇದು ಎಸ್‌ಪಿ ವಿರುದ್ಧ ಒಬ್ಬ ಕಾನ್ಸ್ಟೇಬಲ್ ತನಗೆ ಮಾಡಿದಂತಾಗುತ್ತದೆ. ಒಬ್ಬ ಸಿಎಂ ವಿರುದ್ಧ ಎಸ್ ಐಟಿ ತನಿಖೆ ನಡೆಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಮೂಡ ಅಕ್ರಮ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪತ್ನಿಯೇ ನೇರವಾಗಿ ಭಾಗಿಯಾಗಿದ್ದಾರೆ. ಮೂಡದಿಂದ ಒಮ್ಮೆ ನೋಟಿಫಿಕೇಶನ್ ಆದ ಜಾಗವನ್ನು ಖರೀದಿಸುವುದೇ ಅಪರಾಧ. ಆದರೆ ಸಿದ್ದರಾಮಯ್ಯ ಅವರು ಈ ಪ್ರಕರಣದಲ್ಲಿ ಬುದ್ಧಿವಂತಿಕೆಯಿಂದ ಕೂಡಿದ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Previous articleಆಹಾರ ಇಲಾಖೆ ಅಧಿಕಾರಿಗೆ ಚಾಕು ಇರಿತ
Next articleದಾಖಲೆಗಾಗಿ ಅಷ್ಟೇ ಐಪಿ ಸೆಟ್ ಆರ್.ಆರ್. ನಂಬರ್‌ಗಳಿಗೆ ಅಧಾರ್ ಜೋಡಣೆ