“ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್” ಕಾರ್ಯಕ್ರಮ ಜಾರಿಗೊಳಿಸಿದ್ದು ದೇಶದಲ್ಲೇ ಮೊದಲು
ಬೆಂಗಳೂರು: ಸರ್ಕಾರದ ಕಾರ್ಯಕ್ರಮಗಳು ಜನತೆಗೆ ತಲುಪಿಸುವಲ್ಲಿ ಫೆಲೋಗಳು ಆಸಕ್ತಿಯಿಂದ ಕೆಲಸ ಮಾಡಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆಯವರು ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು “ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್” ಕಾರ್ಯಕ್ರಮ ಜಾರಿಗೊಳಿಸುವ ಮೂಲಕ ದೇಶದಲ್ಲೇ ಮೊದಲು ಎನ್ನುವಂತಹ ಪ್ರಯೋಗವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕೈಗೆತ್ತಿಕೊಂಡಿತ್ತು. ಹಿಂದಿನ ಬಜೆಟ್‌ನಲ್ಲಿ ಈ ಕುರಿತು ಘೋಷಣೆಯನ್ನೂ ಮಾಡಲಾಗಿತ್ತು. ಹಿಂದುಳಿದ ಪ್ರದೇಶವಾದ ಕಲ್ಯಾಣ ಕರ್ನಾಟಕದಲ್ಲಿ ಸ್ಥಳೀಯ ಆಡಳಿತವನ್ನು ಬಲಪಡಿಸುವ ಉದ್ದೇಶದಿಂದ ಉತ್ಸಾಹಿ ಹಾಗೂ ಪ್ರತಿಭಾವಂತ ಯುವ ಸಮುದಾಯಕ್ಕೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡಲಾಗಿತ್ತು. ಸಾಮಾಜಿಕ ಕ್ಷೇತ್ರದಲ್ಲಿ ಆಸಕ್ತಿ ಇರುವ ಪದವೀಧರರಿಗೆ ಇದೊಂದು ಉತ್ತಮ ಅವಕಾಶವಾಗಿದೆ, ಫೆಲೋಗಳು ಕಲ್ಯಾಣ ಕರ್ನಾಟಕ ಭಾಗದ ಸಾಮಾಜಿಕ, ಬೌಗೋಳಿಕ, ಆರ್ಥಿಕ ಹಾಗೂ ಆಡಳಿತಾತ್ಮಕ ಸನ್ನಿವೇಶಗಳನ್ನು ಅರ್ಥೈಸಿಕೊಂಡು ಜಿಲ್ಲಾಡಳಿತದೊಂದಿಗೆ ಕ್ರಿಯಾಶೀಲರಾಗಬೇಕಾಗುತ್ತದೆ.
ತರಬೇತಿಯಾದ ಒಟ್ಟು 44 ಫೆಲೋಗಳೊಂದಿಗೆ ಎಂದು ಪ್ರಗತಿ ವರದಿಯ ಪ್ರಸ್ತುತಿ ಸಭೆಯಲ್ಲಿ ಪಾಲ್ಗೊಂಡೆ, ಕೆಲವೇ ತಿಂಗಳ ಅವಧಿಯಲ್ಲಿ ಈ ಉತ್ಸಾಹಿ ಫೆಲೋಗಳು ಉತ್ತಮ ಕೆಲಸ ಮಾಡಿರುವ ಸಂಗತಿ ತಿಳಿದು ಸಾರ್ಥಕ ಎನಿಸಿತು.
ಸರ್ಕಾರದ ಕಾರ್ಯಕ್ರಮಗಳು ಜನತೆಗೆ ತಲುಪಿಸುವಲ್ಲಿ ಫೆಲೋಗಳು ಆಸಕ್ತಿಯಿಂದ ಕೆಲಸ ಮಾಡಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಗ್ರಾಮಗಳಲ್ಲಿ
- 39 ಅರಿವು ಕೇಂದ್ರಗಳನ್ನು ಪುನರಾರಂಭಿಸುವಲ್ಲಿ ಶ್ರಮ ವಹಿಸಿದ್ದಾರೆ.
- 56 ಅರಿವು ಕೇಂದ್ರಗಳ ದಿನಪತ್ರಿಕೆ, ಮ್ಯಾಗಜಿನ್ ಗಳು ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಿದ್ದಾರೆ.
- ನಿರ್ಲಕ್ಷ್ಯಕ್ಕೆ ಒಳಗಾಗಿ ಮುಚ್ಚಿ ಹೋಗಿದ್ದ 116 ಕೂಸಿನ ಮನೆಗಳನ್ನು ಪುನಃ ಆರಂಭಿಸಿದ್ದಾರೆ.
- ಫೆಲೋಗಳ ಆಸಕ್ತಿ ಹಾಗೂ ಶ್ರಮದಿಂದ 66 ಕೂಸಿನ ಮನೆಗಳ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ.
- 95 ಕೂಸಿನ ಮನೆ ನಿರ್ವಹಣೆಯಲ್ಲಿ ಸುಧಾರಣೆ ಕಂಡಿದೆ.
- 86 ಕೂಸಿನ ಮನೆಗಳಲ್ಲಿ ಪೌಷ್ಟಿಕ ಆಹಾರ ಒದಗಿಸುವಲ್ಲಿ ಕ್ರಮ ವಹಿಸಿದ್ದಾರೆ.
- 61 ಗ್ರಾಮ ಪಂಚಾಯಿತಿಗಳಲ್ಲಿ ಕಸ ಸಂಗ್ರಹಣೆ ಮತ್ತು ಕಸ ವಿಂಗಡಣೆಯ ವ್ಯವಸ್ಥೆ ಮಾಡಿದ್ದಾರೆ.
- 23 ಗ್ರಾಮ ಪಂಚಾಯಿತಿಗಳಲ್ಲಿ ತ್ಯಾಜ್ಯ ನಿರ್ವಹಣಾ ಶುಲ್ಕ ಸಂಗ್ರಹಕ್ಕೆ ಕ್ರಮ ವಹಿಸಿದ್ದಾರೆ.
- 197 ಜನರಲ್ ಬಾಡಿ ಮೀಟಿಂಗ್ ಗಳನ್ನು ಆಯೋಜಿಸಿದ್ದಾರೆ.
- 104 ಗ್ರಾಮ ಪಂಚಾಯತ್ ಗಳಲ್ಲಿ ಸಭೆಯ ಮಾಹಿತಿಯನ್ನು ಪಿ2.0 ನಲ್ಲಿ ಅಪ್ಲೋಡ್ ಮಾಡಲು ಕ್ರಮ ವಹಿಸಿದ್ದಾರೆ
- 81 ವಾರ್ಡ್ ಸಭೆ, ಗ್ರಾಮ ಸಭೆಯನ್ನು ನಿರ್ವಹಿಸಿದ್ದಾರೆ
- ಫೆಲೊಗಳ ಇಚ್ಛಾಶಕ್ತಿಯಲ್ಲಿ 508 ಸಬ್ ಕಮಿಟಿಗಳು ರಚನೆಯಾಗಿವೆ
- ಓದುವ ಸಂಸ್ಕೃತಿಯನ್ನು ಹೆಚ್ಚಿಸಲು ಪುಸ್ತಕ ಗೂಡು ಎಂಬ ವಿನೂತನ ಮಾದರಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ
ನಮ್ಮ ಸರ್ಕಾರದ ರಾಜೀವ್ ಗಾಂಧಿ ಫೆಲೋಶಿಪ್ ಕಾರ್ಯಕ್ರಮದಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಗ್ರಾಮ ಮಟ್ಟದಲ್ಲಿ ಉತ್ತಮ ಕೆಲಸವಾಗುತ್ತಿರುವುದಕ್ಕೆ ಈ ಉತ್ಸಾಹಿ ಫೆಲೋಗಳ ಶ್ರಮ ಮತ್ತು ಆಸಕ್ತಿ ಮಹತ್ತರ ಪಾತ್ರವಿದೆ ಎಂದಿದ್ದಾರೆ.