ಈದ್ಗಾ ಮೈದಾನದಲ್ಲಿ ಪಾಲಿಕೆ ಆಯುಕ್ತರಿಂದ ಧ್ವಜಾರೋಹಣ

0
30

ಹುಬ್ಬಳ್ಳಿ : ಗಣ ರಾಜ್ಯೋತ್ಸವ ಪ್ರಯುಕ್ತ ನಗರದ ರಾಣಿ ಚನ್ನಮ್ಮ ಮೈದಾನ ( ಈದ್ಗಾ ಇರುವ ಸ್ಥಳ ) ದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಧ್ವಜಾರೋಹಣ ಮಾಡಿದರು.
ನೆಹರು ಮೈದಾನದಲ್ಲಿ ಶಹರ ತಹಶೀಲ್ದಾರ ಕಲಗೌಡ ಪಾಟೀಲ, ತಾಲೂಕು ಆಡಳಿತ ಸೌಧದಲ್ಲಿ ಗ್ರಾಮೀಣ ತಹಶೀಲ್ದಾರ ಜಿ.ಬಿ ಮಜ್ಜಗಿ, ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಯಶವಂತಕುಮಾರ ಅವರು ಧ್ವಜಾರೋಹಣ ನೆರವೇರಿಸಿದರು.
ನೆಹರು ಮೈದಾನದಲ್ಲಿ ವಿವಿಧ ಶಾಲಾ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. ದೇಶಭಕ್ತಿ ಗೀತೆ, ನಾಡು ನುಡಿ ಅಭಿಮಾನದ ಗೀತೆಗಳಿಗೆ ನೃತ್ಯ ಮಾಡಿದರು. ವೀರ ವನಿತೆಯರ, ಸ್ವಾತಂತ್ರ್ಯ ಹೋರಾಟಗಾರರ ಪೋಷಾಕಿ‌ನಲ್ಲಿ ಗಮನ ಸೆಳೆದರು.
ನಗರದ ವಿವಿಧ ಕಡೆ ಶಾಲಾ, ಕಾಲೇಜು , ಸಂಘ ಸಂಸ್ಥೆಗಳಿಂದ ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು.

Previous articleಗಣರಾಜ್ಯೋತ್ಸವದ ಸಂದರ್ಭದಲ್ಲಿ ಅವಘಡ
Next articleನಾಡಿನ ಜನತೆಗೆ ಮುಖ್ಯಮಂತ್ರಿಯಿಂದ 76ನೇ ಗಣರಾಜ್ಯೋತ್ಸವದ ಶುಭಾಶಯ