ಇ-ಆಸ್ತಿಗೆ ಜನರು ಸುಸ್ತು: ಬಿಕೋ ಎನ್ನುತ್ತಿರುವ ಸಹಕಾರಿ ಸಂಘಗಳು

0
33

ಮಲ್ಲಿಕಾರ್ಜುನ ತುಂಗಳ
ಬಾಗಲಕೋಟೆ: ಜಿಲ್ಲೆಯಲ್ಲಿ ಕಳೆದ ಸೆ. 9ರಿಂದ ಮನೆ ಖರೀದಿ, ಸಾಲ ಸೌಲಭ್ಯ ಸೇರಿದಂತೆ ಸರ್ಕಾರಿ ಕೆಲಸಕ್ಕೆ ಕಡ್ಡಾಯ ಇ-ಆಸ್ತಿ ಉತಾರೆ ಬೇಕೆಂಬ ಆದೇಶ ಸಾರ್ವಜನಿಕರಲ್ಲಿ ಗೊಂದಲದ ಜೊತೆಗೆ ಸುಸ್ತಾಗುವಲ್ಲಿ ಕಾರಣವಾಗಿದೆ.
ರಬಕವಿ-ಬನಹಟ್ಟಿ ನಗರಸಭೆಯ ಸುಮಾರು 16 ಸಾವಿರ ಆಸ್ತಿ ಖಾತೆಗಳ ಪೈಕಿ ಕಳೆದ 5 ತಿಂಗಳಲ್ಲಿ ಕೇವಲ 3 ಸಾವಿರ ಖಾತೆಗಳು ಇ-ಖಾತೆಗೆ ಅವಕಾಶವಾಗಿದ್ದು, ಇನ್ನುಳಿದ 13 ಸಾವಿರಕ್ಕೂ ಅಧಿಕ ವಾರಸುದಾರರು ಇದರ ಪ್ರಯೋಜನ ಪಡೆಯಬೇಕಿದೆ.

ವಿಳಂಬಕ್ಕೆ ಕಾರಣ
ನೇಕಾರ ಪ್ರಧಾನ ಕ್ಷೇತ್ರವಾಗಿರುವ ಹಾಗು ಅನಕ್ಷರತೆಯಿಂದಿರುವ ನಗರಸಭೆಯ ಜನತೆಗೆ ಇದರ ಮಾಹಿತಿ ಪರಿಪೂರ್ಣವಾಗಿ ಅರಿವಾಗಿಲ್ಲ. ಮತ್ತೊಂದೆಡೆ ಸರ್ಕಾರದ ನಿಯಮಗಳೇ ಖಾತೆಯಾಗಲು ಮಾರಕವಾಗುವಲ್ಲಿ ಕಾರಣವಾಗಿದೆ.ಪ್ರಮುಖವಾಗಿ ಈ ಪ್ರದೇಶದಲ್ಲಿ 2000 ಇಸ್ವಿಯ ನಂತರ ಮಾತ್ರ ಕೆಜೆಪಿ(ಕಡಿಮೆ-ಜಾಸ್ತಿ-ಪತ್ರ) ಹಾಗು ಎನ್.ಎ.(ಕೃಷಿಯೇತರ) ದಾಖಲಾತಿಗಳು ಮನೆ ಖರೀದಿದಾರರಿಗೆ ದೊರಕುವಲ್ಲಿ ಕಾರಣವಾಗಿದ್ದು, ಈ ಹಿಂದೆ ಖರೀದಿಸಿದ ಮನೆ ಹಾಗು ಜಾಗೆಗಳಿಗೆ ಸರಿಯಾದ ದಾಖಲಾತಿಗಳಿಲ್ಲ.

ನಗರಸಭೆಯಲ್ಲಿ ಸಿಬ್ಬಂದಿ ಕೊರತೆ
ರಬಕವಿ-ಬನಹಟ್ಟಿ ನಗರಸಭೆಯಲ್ಲಿ ರಬಕವಿ-ಬನಹಟ್ಟಿ-ಹೊಸೂರ ಹಾಗು ರಾಮಪೂರ ನಗರಗಳಿಗೆ ಕೇವಲ ಇಬ್ಬರು ಮಾತ್ರ ಇ-ಆಸ್ತಿಗೆ ಸಂಬಂಧಿಸಿದ ಸಿಬ್ಬಂದಿಗಳಾಗಿದ್ದಾರೆ.
ಕಚೇರಿಗೆ ಆಗಮಿಸುವ ಫಲಾನುಭವಿಗಳು ಎರಡು ತಿಂಗಳುಗಟ್ಟಲೇ ಕಾಯಬೇಕಾದ ಅನಿವಾರ್ಯತೆಯಿಂದ ಸಿಬ್ಬಂದಿ ಹೆಚ್ಚಳದ ಜೊತೆಗೆ ಸಾರ್ವಜನಿಕರಿಗೆ ಸಹಕಾರಿಯಾಗಬೇಕಾದ ಅನಿವಾರ್ಯತೆಯಿದೆ.

ಪ್ರಮುಖ ದಾಖಲೆಗಳೇನು?
ಇ-ಆಸ್ತಿ ಗ್ರಾಮೀಣದಲ್ಲಿ ಇ-ಸ್ವತ್ತು ಪಡೆಯಲು ಪ್ರಮುಖ ದಾಖಲೆಗಳಾದ ಡ ಉತಾರೆ, ಸಿಟಿಎಸ್ ಉತಾರೆ ಹಾಗು ನಕಾಶೆ, ಮನೆ ಹಾಗು ನೀರಿನ ಕರ ಹಾಗು ಭಾವಚಿತ್ರದೊಂದಿಗೆ ಚುನಾವಣಾ ಪತ್ರ ಕಡ್ಡಾಯವಾಗಿದ್ದು, ಇವುಗಳೊಂದಿಗೆ ಕೆಜೆಪಿ ಹಾಗು ಎನ್.ಎ. ದಾಖಲಾತಿ ಕೆಲ ಆಸ್ತಿದಾರರಿಗೆ ಸವಾಲಾಗಿದೆ.

ಬಿಕೋ ಎನ್ನುವ ಸಹಕಾರಿ ಸಂಘಗಳು
ನೇಕಾರ ಪ್ರಧಾನ ಕ್ಷೇತ್ರವಾಗಿರುವ ರಬಕವಿ-ಬನಹಟ್ಟಿಯಲ್ಲಿ ಬರುವ ಮಾರ್ಚ್ ತಿಂಗಳು ವಾರ್ಷಿಕ ಮರು ಸಾಲ ಮಾಡಬೇಕಿದೆ. ಗೃಹ ಸಾಲ, ನಿವೇಶನ ಸಾಲ ಹಾಗು ನೇಕಾರರಿಗೆ ಶೇ.1 ಮತ್ತು 3 ಬಡ್ಡಿ ದರದ ಆಕರಣೆಯ ಸಾಲ ಗಗನಕುಸುಮವಾಗಲು ಕಾರಣವಾಗಿದ್ದರೆ, ಮತ್ತೊಂದೆಡೆ ಸಾಲ ಒದಗಿಸುವ ತವಕದಲ್ಲಿರುವ ಸಹಕಾರಿ ಸಂಘಗಳಿಗೆ ಪೂರಕ ದಾಖಲಾತಿಯಲ್ಲಿ ಮನೆ ಆಸ್ತಿ ದೊರಕದಿರುವದರಿಂದ ಸಾಲ ಒದಗಿಸುವಲ್ಲಿ ಹಿಂದೇಟು ಹಾಕುವಲ್ಲಿ ಕಾರಣವಾಗಿದೆ.

ಸೊಸೈಟಿಗಳ ವಾದ
ಬ್ಯಾಂಕ್, ಸೊಸೈಟಿ ಸಾಲ ನೀಡುವಾಗ ಆರ್‌ಬಿಐ ನಿರ್ದೇಶನ ಅಡಚಣೆಯಾಗದಂತೆ ಉಪನೊಂದಣಾಧಿಕಾರಿಗಳ ಕಚೇರಿಗೆ ಸೂಕ್ತ ಮಾರ್ಗದರ್ಶನ ಅವಶ್ಯ. ಪೂರ್ವ ತಯಾರಿಯಿಲ್ಲದೆ ಕೈಗೊಂಡ ಕ್ರಮ ಸಹಕಾರಿ ಕ್ಷೇತ್ರಕ್ಕೆ ಮಾರಕವಾಗುವಲ್ಲಿ ಕಾರಣವಾಗಿದೆ.

Previous article`ನ್ಯಾಕ್ ಗ್ರೇಡ್’ ಎಂಬ ಬೃಹನ್ನಾಟಕ!
Next articleಉಚಿತ ವಿದ್ಯುತ್ ಇದ್ದರೂ ಇಳಿಮುಖ ಕಾಣುತ್ತಿರುವ ಮಗ್ಗಗಳು..