ಇಂಧನ ಸಂಗ್ರಹಕ್ಕೆ ಹೆಚ್ಚಿನ ಉತ್ತೇಜನ

0
16

ಬೆಂಗಳೂರು: ನವೀಕರಿಸಬಹುದಾದ ಇಂಧನದ ಮೂಲಕ 500GW ಸಾಮರ್ಥ್ಯ ಸಾಧಿಸುವ ಆಕಾಂಕ್ಷೆ ಹೊಂದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು 2030ರ ವೇಳೆಗೆ ನವೀಕರಿಸಬಹುದಾದ ಇಂಧನದ ಮೂಲಕ 500GW ಸಾಮರ್ಥ್ಯ ಸಾಧಿಸಬೇಕೆಂಬುದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಕಾಂಕ್ಷೆ ಹೊಂದಿದ್ದಾರೆ.
ಈ ಹಿಂದೆ ನಾನು ಗಣಿ ಮತ್ತು ಖನಿಜ ಸಚಿವನಾಗಿದ್ದ ಅವಧಿಯಲ್ಲಿ, ಪ್ರಮುಖ ನಿರ್ಣಾಯಕ ಖನಿಜ ನೀತಿ ಮತ್ತು ಸುಧಾರಣೆಗಳನ್ನು ಮಾಡಲಾಗಿದೆ ಮತ್ತು ಈ ಬಜೆಟ್‌ನಲ್ಲಿ, ವಿದೇಶದಿಂದ ನಿರ್ಣಾಯಕ ಖನಿಜಗಳನ್ನು ಪಡೆಯಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವಕಾಶವನ್ನು ನೀಡಿದ್ದು, ಇಂಧನ ಸಂಗ್ರಹಕ್ಕೆ ಹೆಚ್ಚಿನ ಉತ್ತೇಜನವನ್ನು ನೀಡಲಿದೆ ಎಂದಿದ್ದಾರೆ.

Previous articleಮಂಗಳೂರು-ಸುಬ್ರಹ್ಮಣ್ಯ ಮಧ್ಯೆ ಪ್ಯಾಸೆಂಜರ್ ರೈಲು ಆರಂಭಿಸಲು ಒತ್ತಾಯ
Next articleಬೈಕ್ ಮೇಲೆ ಮರ ಬಿದ್ದು ಸವಾರ ಸ್ಥಳದಲ್ಲಿಯೇ ಸಾವು