ಆಳ್ವಿಕೆ ನಡೆಸುವ ಅರಸರು ವಿಚಾರ ಮಾಡಬೇಕು

ಸೂ*ಯ ಮಗನು ಹುಟ್ಟಿ ಆಳುವನು ಮುನಿಪುರವ . ಯುದ್ದವಿಲ್ಲದ ಮಡಿಯೆ ಪುರವೆಲ್ಲ ಕೋಳಾದೀತು. ಅರಸನಾಲಯಕ್ಕೆ ಕಾರ್ಮೋಡ ಕವಿದೀತು

ಬಾಗಲಕೋಟೆ: ಹೊಳೆಯನ್ನು ಈಜಿದರೆ ಬದಲಾವಣೆ ಆಗಬಹುದು, ಹಾಲು ಕೆಟ್ಟರು ಹಾಲು‌ಮತ‌ ಕೆಡುವುದಿಲ್ಲ. ಆಂತವರ‌ ಕೈಲಿ ಅಧಿಕಾರ ಸಿಕ್ಕಿರುವುದರಿಂದ ಬಿಡಿಸೋದು ಕಷ್ಟ. ಅವರಾಗಿಯೇ ಬಿಟ್ರೆ ನಿಮಗೆ ಸಿಗುತ್ತದೆ ಎಂದು ಸಿಎಂ ಬದಲಾವಣೆ ಬಗ್ಗೆ ಕುರಿತಂತೆ ಕೋಡಿಶ್ರೀಗಳು ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ ವರ್ಷದಲ್ಲಿ ಎರಡು ಭಾರಿ ಭವಿಷ್ಯ ಹೇಳಲಾಗುವುದು, ಒಂದು ಯುಗಾದಿ ಭವಿಷ್ಯ, ಇನ್ನೊಂದು ಸಂಕ್ರಾಂತಿ ಭವಿಷ್ಯ. ಯುಗಾ ಭವಿಷ್ಯ ಪ್ರಕೃತಿಗೆ ಸಂಬಂಧಿಸಿದ್ದು. ಸಂಕ್ರಾಂತಿ ಭವಿಷ್ಯ ರಾಜರಿಗೆ ಸಂಬಂಧಿಸಿದ್ದು. ಸಂಕ್ರಾಂತಿವರೆಗೆ ಯಾವ ಬದಲಾವಣೆ ದೋಷ ಕಾಣುತ್ತಿಲ್ಲ. ಅಲ್ಲಿವರೆಗೂ ರಾಜನ ಬದಲಾವಣೆ ಆಗುವ ಯಾವುದೇ ಸಾಧ್ಯತೆ ಇಲ್ಲ. ಸಂಗಮೇಶ ನಲಿವನೆ‌, ಆದರೆ ‌ಒಳ‌ ಅಡ್ಡ ಬಂದಿದೆ ಬದಲಾವಣೆ ವಿಚಾರದಲ್ಲಿ, ಹೊಳೆಯನ್ನು ಈಜಿದರೆ ಬದಲಾವಣೆ ಆಗಬಹುದು, ಹಾಲು ಕೆಟ್ಟರು ಹಾಲು‌ಮತ‌ ಕೆಡುವುದಿಲ್ಲ. ಆಂತವರ‌ ಕೈಲಿ ಅಧಿಕಾರ ಸಿಕ್ಕಿರುವುದರಿಂದ ಬಿಡಿಸೋದು ಕಷ್ಟ. ಅವರಾಗಿಯೇ ಬಿಟ್ರೆ ನಿಮಗೆ ಸಿಗುತ್ತದೆ ಎಂದಿದ್ದಾರೆ.

ಯುದ್ಧ ಕುರಿತಂತೆ: ಉತ್ತರ ನಾಡು ಕಾಶ್ಮೀರದಲ್ಲಿ ಈಗ ಈ ಸಂಘರ್ಷ ಏರ್ಪಟ್ಟಿದೆ. ಮುಂದಿನ ದಿನಗಳಲ್ಲಿ ಪೂರ್ತಿ ದಕ್ಷಿಣ ಭಾರತ ಸೇರಿದಂತೆ ಜಗಕ್ಕೆಲ್ಲವೂ ಸಂಕಷ್ಟವನ್ನು ತಂದೊಡ್ಡಲಿದೆ. ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಮತಾಂಧ ಗಲಭೆ ಹೆಚ್ಚಾಗುತ್ತೆ. ಮರಣ ಮೃದಂಗ ಶುರುವಾಗುತ್ತದೆ. ಸಾವು ನೋವುಗಳು ಹೆಚ್ಚಾಗುತ್ತವೆ. ಹೀಗಾಗಿ ಆಳ್ವಿಕೆ ನಡೆಸುತ್ತಿರುವ ಅರಸರು ಇದರ ಬಗ್ಗೆ ವಿಚಾರ ಮಾಡಬೇಕು, ನಮ್ಮ ದೇಶದಲ್ಲಿ ಎಂದಿಗೂ, ಯಾವುದೇ ಕಾರಣಕ್ಕೂ ಮಾನವೀಯ ಮೌಲ್ಯಗಳನ್ನು ಬಲಿ ಕೊಡಬಾರದು. ರಾಷ್ಟ್ರಪ್ರೇಮ, ದೇಶಪ್ರೇಮ, ಧನಪ್ರೇಮ ಇವು ಮಾನವೀಯ ಮೌಲ್ಯಗಳ ಪೈಕಿ ಅತೀ ಮುಖ್ಯವಾದವು. ಇಂತಹ ಮೌಲ್ಯಗಳಿಗೆ ಮತಕೊಟ್ಟಿದ್ದರಿಂದ ಸರ್ಕಾರಗಳು ಅಧಿಕಾರಕ್ಕೆ ಬಂದಿವೆ. ಆದರೆ, ಸರ್ಕಾರಗಳು ಮಾನವೀಯತೆಗೆ ವಿರುದ್ಧವಾಗಬಾರದು. ಸರ್ಕಾರದ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಸಮಸ್ತ ಭಾರತೀಯರು ಒಪ್ಪಿಗೆ ಕೊಡಬೇಕು, ಮುಂದುವರಿದು, ಇದು ಆಳ್ವಿಕೆ ನಡೆಸುತ್ತಿರುವವ ಜವಾಬ್ದಾರಿ. ನಮ್ಮಲ್ಲಿ ಪ್ರಧಾನಿ, ರಾಷ್ಟ್ರಪತಿ ಇದ್ದಾರೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಇದ್ದಾರೆ. ಇವರೆಲ್ಲೂ ಸೇರಿ ವಿಚಾರ ಮಾಡಬೇಕು. ನಾವು ಎಲ್ಲರಿಗೂ ಒಳಿತಾಗಲಿ ಎಂದಷ್ಟೇ ಹೇಳಬಹುದು ಎಂದರು.