ಆರ್. ಅಶೋಕ್, ಕುಮಾರಸ್ವಾಮಿಗೆ ಹುಚ್ಚು ಹಿಡಿದಿದೆ

0
22

ರಾಯಚೂರು: ಬಿಜೆಪಿ-ಜೆಡಿಎಸ್‌ನವರಿಗೆ ಮಾಡೋದಕ್ಕೆ ಬೇರೇನೂ ಕೆಲಸಗಳಿಲ್ಲ. ಸರ್ಕಾರವನ್ನು ಅಭದ್ರಗೊಳಿಸುವುದನ್ನು ಬಿಟ್ಟು ಬೇರೆ ಏನೂ ಗೊತ್ತಿಲ್ಲ ಎಂದು ಸಚಿವ ಎನ್‌ಎಸ್ ಬೋಸರಾಜು ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಈ ಹಿಂದೆ 14 ಜನ ಶಾಸಕರನ್ನು ಸಂಪರ್ಕಿಸಿ ನೂರಾರು ಕೋಟಿ ಆಮಿಷ ಒಡ್ಡಿದ್ರು. ಆದರೆ ಇವರ ಆಮಿಷೆಗಳಿಗೆ ಒಪ್ಪದಿದ್ದಕ್ಕೆ ಕೇಂದ್ರದ ಬಿಜೆಪಿ ಇಡಿ, ಐಟಿ, ಸಿಬಿಐ ದುರ್ಬಳಕೆ ಮಾಡ್ಕೊಳ್ತಿದಾರೆ. ಇದು ಸಾಲದ್ದಕ್ಕೆ ಡಿಸಿಎಂ ಮೇಲೆ ಒತ್ತಡ ತಂದ್ರು ಅದಕ್ಕೂ ಬಗ್ಗಲಿಲ್ಲ ಎಂದು ಇದೀಗ ಸಿಎಂ ಸಿದ್ದರಾಮಯ್ಯರ ಬೆನ್ನು ಬಿದ್ದಿದ್ದಾರೆ. ಸಿಎಂ ಸಿದ್ದರಾಮಯ್ಯರ ಹೆಸರಿಗೆ ಮಸಿ ಬಳೀಬೇಕು, ತೊಂದರೆ ಕೊಡಬೇಕು, ಅವರ ಸ್ಥಾನದಿಂದ ತೆಗೆದರೆ ಸರ್ಕಾರ ಬಿಳುತ್ತೆ ಅನ್ನುವ ಯೋಚನೆ ಬಿಜೆಪಿ ಜೆಡಿಎಸ್‌ನವರು ಮಾಡ್ತಿದ್ದಾರೆ. ಹಾಗಾಗಿ ಬಿಜೆಪಿ ಸರ್ಕಾರದ ಅವಧಿಯಲ್ಲಾದ ಮುಡಾ ಹಗರಣ ಹಿಡಿದು ಕೂತಿದ್ದಾರೆ. ಸರ್ಕಾರದ ಮೇಲೆ ಬೇರೆ ಬೇರೆ ರೀತಿಯ ಒತ್ತಡ ತರೋದನ್ನು ಸಹಿಸಲಾರದೇ ಸಿಎಂ‌ ಪತ್ನಿ 14 ಸೈಟುಗಳನ್ನು ಸರಂಡರ್‌ ಮಾಡ್ತಿದಾರೆ. ಅದೇ ರೀತಿ ಅಶೋಕ್ ಹಾಗೂ ಕುಮಾರಸ್ವಾಮಿ‌ ಹೇಗೆ ಸರೆಂಡರ್‌ ಮಾಡ್ತಾರೆ ಎಂದು ಪ್ರಶ್ನಿಸಿದರು. ಸಿಎಂ ಪತ್ನಿ ಪಾರ್ವತಿ ಅವರು 14 ಸೈಟುಗಳನ್ನು ಸರೆಂಡರ್‌ ಮಾಡಿದ್ದನ್ನು ಇವರಿಬ್ಬರೂ ಹೇಗೆ ಸರೆಂಡರ್‌ ಮಾಡಿದ್ರು ಅಂತ ಪ್ರಶ್ನಿಸ್ತಾರೆ. ಕುಮಾರಸ್ವಾಮಿ ಅವರ ಮೇಲೆ 50 ಕೋಟಿ ಕೇಳಿ ಬೆದರಿಕೆ ಹಾಕಿದ ಬಗ್ಗೆ ಎಫ್‌ಐಆರ್ ಆಗಿದೆ. ಅಶೋಕ್ ಅವರ ಮೇಲೆ ಭೂಹಗರಣ ಎಫ್‌ಐಆರ್ ಆಗಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ಮೇಲೆ ನೂರು ಕೇಸ್‌ಗಳಿವೆ. ಅವರ ಮೇಲೆ ಏನು ಕ್ರಮ ತೆಗೆದುಕೊಂಡ್ರು? ಎಂದು ಪ್ರಶ್ನಿಸಿದರು. ಆರ್‌ ಅಶೋಕ ವಿರೋಧ ಪಕ್ಷದ ನಾಯಕರು ಕುಮಾರಸ್ವಾಮಿ ಕೇಂದ್ರ ಸಚಿವರು. ಇವರಿಗೆ ಯಾವ ರೀತಿಯ ಬದ್ಧತೆಯಿದೆ. ಜವಾಬ್ದಾರಿಯಿದೆ. ಇವರ ಮಾತುಗಳಿಗೆ ಅರ್ಥವಿದೆಯಾ? ಹುಚ್ಚರು ಮಾಡಿದ ಹಾಗೇ ಮಾಡಿ ಏನೇನೋ ಒದರಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು

Previous articleಕಲುಷಿತ ನೀರು ಸೇವನೆ 1000ಕ್ಕೂ ಹೆಚ್ಚು ಮಂದಿ ಅಸ್ವಸ್ಥ
Next articleFIR ಆಗಿರುವ ಎಲ್ಲರೂ ರಾಜೀನಾಮೆ ಕೊಡಲಿ