ಆರ್‌‌ಸಿಬಿಯ  ಹ್ಯಾಟ್ರಿಕ್‌ ಗೆಲುವಿನ ಅಧ್ಯಾಯ

0
18

ಬೆಂಗಳೂರು:  ಗುಜರಾತ್ ಟೈಟಾನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಲ್ಲಿ ಆರ್‌‌ಸಿಬಿ ಗೆಲುವು ಸಾಧಿಸಿ, ಹ್ಯಾಟ್ರಿಕ್‌ ಗೆಲುವಿನ ಅಧ್ಯಾಯ ಬರೆದಿದೆ.
   ಟಾಸ್‌ ಗೆದ್ದ ಆರ್‌‌ಸಿಬಿ ನಾಯಕ ಫಾಫ್ ಡುಪ್ಲೇಸಿಸ್‌ ಬಳಗ ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು.  ಮೊದಲು ಬ್ಯಾಟಿಂಗ್‌ ಆರಂಭಿಸಿದ ಗುಜರಾತ್‌  ತಂಡವು 19.3 ಓವರ್‌ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 147 ರನ್‌ ಪ್ರೇರೇಪಿಸಿತು. ಈ ಸುಲಭ ಗುರಿ ಬೆನ್ನಟ್ಟಿದ ಬೆಂಗಳೂರು ತಂಡ 13.4 ಓವರ್‌‌ಗೆ 6 ವಿಕೆಟ್ ನಷ್ಟಕ್ಕೆ 152 ರನ್‌ ಗಳಿಸಿ 4 ವಿಕೆಟ್‌‌ ಗಳ ಭರ್ಜರಿ ಗೆಲುವು ದಾಖಲಿಸಿ  ಗುಜರಾತ್‌ ವಿರುದ್ಧ ಆರ್‌ಸಿಬಿಗೆ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿತು. ಇದರಿಂದ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ  ಆರ್‌ಸಿಬಿ ಏರಿದೆ.

Previous articleಸುಪ್ರೀಂಗೆ ಹೋಗಿದ್ದರಿಂದಲೇ ರಾಜ್ಯಕ್ಕೆ ಪರಿಹಾರ
Next articleದಿಂಗಾಲೇಶ್ವರಶ್ರೀ ವಿರುದ್ಧ ಕುಮಾರಸ್ವಾಮಿ ದೂರು