ಆರಂಭಕ್ಕೂ ಮುನ್ನವೇ ಬದಲಾದ ‘ವಂದೇ ಮೆಟ್ರೋ’ ಹೆಸರು

0
11

ನವದೆಹಲಿ: ದೇಶದ ಮೊತ್ತಮೊದಲ ವಂದೇ ಮೆಟ್ರೋ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ ಆರಂಭಕ್ಕು ಮುನ್ನ ವಂದೇ ಮೆಟ್ರೋ ರೈಲಿನ ಹೆಸರು ಬದಲಾವನೆಯಾಗಿದೆ ಎಂದು ತಿಳಿದುಬಂದಿದೆ.
ಈ ರೈಲನ್ನು ಪ್ರಾರಂಭಿಸುವ ಮೊದಲು, ರೈಲ್ವೆ ಸಚಿವಾಲಯವು ಅದರ ಹೆಸರನ್ನು ‘ನಮೋ ಭಾರತ್ ರ‍್ಯಾಪಿಡ್‌ ರೈಲ್’ ಎಂದು ಬದಲಾಯಿಸಲು ನಿರ್ಧರಿಸಿದೆ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮದಿನದ ಮುನ್ನಾ ದಿನವಾದ ಇಂದು (ಸೆಪ್ಟೆಂಬರ್‌ 16) ಗುಜರಾತ್‌ನಲ್ಲಿ ದೇಶದ ಮೊಟ್ಟ ಮೊದಲ ನಮೋ ಭಾರತ್ ರ‍್ಯಾಪಿಡ್ ರೈಲು ಸೇವೆಗೆ ಚಾಲನೆ ನೀಡಲಿದ್ದಾರೆ. ಅಹಮದಾಬಾದ್‌ನಲ್ಲಿ ಸಂಜೆ ಭುಜ್ ರೈಲು ನಿಲ್ದಾಣದಲ್ಲಿ ದೇಶದ ಮೊದಲ ‘ನಮೋ ಭಾರತ್ ರ‍್ಯಾಪಿಡ್‌ ರೈಲು’ ಸೇವೆಗೆ ಚಾಲನೆ ನೀಡಲಿದ್ದಾರೆ. ಈ ರ‍್ಯಾಪಿಡ್‌ ರೈಲು ಗುಜರಾತ್‌ನ ಕಚ್ ಜಿಲ್ಲೆಯಲ್ಲಿರುವ ಭುಜ್ ಅನ್ನು ರಾಜ್ಯದ ಪ್ರಮುಖ ನಗರಗಳಲ್ಲಿ ಒಂದಾದ ಅಹಮದಾಬಾದ್‌ನೊಂದಿಗೆ ಸಂಪರ್ಕ ಕಲ್ಪಿಸುತ್ತದೆ. 359 ಕಿ.ಮೀ ದೂರವನ್ನು ಕೇವಲ 5:45 ಗಂಟೆಗಳಲ್ಲಿ ಕ್ರಮಿಸುತ್ತದೆ. ಈ ನಡುವೆ ಒಂಬತ್ತು ನಿಲ್ದಾಣಗಳಲ್ಲಿ ರೈಲು ನಿಲುಗಡೆಯಾಗಲಿದೆ. ಸೆಪ್ಟೆಂಬರ್ 17ರಿಂದ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ.

Previous articleಪಾಂಡವಪುರ: RSS ಕಚೇರಿಗೆ ಪೋಲಿಸರು ನುಗ್ಗಿದ ಘಟನೆ ಅತ್ಯಂತ ಖಂಡನೀಯ
Next articleಕಲ್ಯಾಣ ಕರ್ನಾಟಕ‌ದ ಸಮಗ್ರ ಅಭಿವೃದ್ದಿಗಾಗಿ ಸಿಎಂ ನೇತೃತ್ವದಲ್ಲಿ‌ ಸಚಿವ ಸಂಪುಟ ಸಭೆ