ಆದಾಯ ಬರುತ್ತಿದೆ ಎಂದವರು ಈಗ…

0
14

ಬೆಂಗಳೂರು: ಸಾರಿಗೆ ನಿಗಮಗಳಿಗೆ ಅಪಾರ ಆದಾಯ ಬರುತ್ತಿದೆ ಎಂದವರು ನಷ್ಟವಾಗಿದೆ ಟಿಕೆಟ್ ದರ ಹೆಚ್ಚಿಸಬೇಕು ಎನ್ನುತ್ತಿದ್ದಾರೆ ಎಂದು ಆರ್‌ ಅಶೋಕ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಗಳಿಗೆ 3,930 ಕೋಟಿ ರೂಪಾಯಿ ಆದಾಯ ಬರುತ್ತದೆ ಎಂದು ಇತ್ತೀಚೆಗಷ್ಟೆ ಬೊಗಳೆ ಬಿಟ್ಟು ತನ್ನ ಬೆನ್ನು ತಾನೇ ತಟ್ಟಿಕೊಂಡಿದ್ದ ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಈಗ ಕಳೆದ ತ್ರೈಮಾಸಿಕದಲ್ಲಿ ₹295 ಕೋಟಿ ನಷ್ಟವಾಗಿದೆ ಎಂಬ ನೆಪವೊಡ್ಡಿ ಟಿಕೆಟ್ ದರ ಹೆಚ್ಚಿಸಲು ಮುಂದಾಗಿದೆ. ಸಿಎಂ ಸಿದ್ದರಾಮಯ್ಯನವರೇ, ತಮ್ಮ ಅನುಕೂಲಕ್ಕೆ ತಕ್ಕಂತೆ, ಸುಳ್ಳಿನ ಮೇಲೆ ಸುಳ್ಳು ಹೇಳಿ, ಎಷ್ಟು ದಿನ ಹೀಗೆ ಕನ್ನಡಿಗರಿಗೆ ಮೋಸ ಮಾಡುತ್ತೀರಿ. ನಿಮ್ಮ ಮುಖವಾಡ ಕಳಚಿದೆ. ಜನ ದಂಗೆ ಏಳುವ ಮುನ್ನ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಅಧಿಕಾರಕ್ಕೆ ಅಂಟಿಕೊಂಡು ಗೌರವ ಕಳೆದುಕೊಳ್ಳಬೇಡಿ ಎಂದಿದ್ದಾರೆ.

Previous articleಪಿಜಿಸಿಇಟಿ-2024: ಪರಿಷ್ಕೃತ ವೇಳಾಪಟ್ಟಿ ಪ್ರಕಟ
Next article16 ನೇ ವಿಧಾನ ಸಭೆಯ ಮುಂಗಾರು ಅಧಿವೇಶನ ನೇರಪ್ರಸಾರ