ಅದು ಮುಗಿದುಹೋದ ಅಧ್ಯಾಯ: ಇಂದು ಲಿಂಗಾಯತ ನಾಯಕರು ಹೈಕಮಾಂಡ್ ಭೇಟಿ ಮಾಡುತ್ತೇವೆ
ದೆಹಲಿ : ರಾಜ್ಯದಲ್ಲಿ ಎಲ್ಲ ಲಿಂಗಾಯತರು ಬಿಎಸ್ ಯಡಿಯೂರಪ್ಪ ಪರವಾಗಿಲ್ಲ, ಯಡಿಯೂರಪ್ಪ ಅವರು ಆ ಗೌರವ ಉಳಿಸಿಕೊಂಡಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಹೇಳಿದ್ದಾರೆ.
ಹೈಕಮಾಂಡ್ ಭೇಟಿಗೆ ಬಿಜೆಪಿ ಯತ್ನಾಳ್ ಬಣ ಬಂದಿದ್ದು, ಇಂದು ದೆಹಲಿಗೆ ಮಾಧ್ಯಮದವರ ಜೊತೆ ಮಾತನಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿಜಯೇಂದ್ರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಇಂದು ಲಿಂಗಾಯತ ನಾಯಕರು ಹೈಕಮಾಂಡ್ ಭೇಟಿ ಮಾಡುತ್ತೇವೆ, ಕೆಲ ನಾಯಕರು ನಿನ್ನೆ ಭೇಟಿಯಾಗಿದ್ದಾರೆ, ಇಂದು ನಾವು ಭೇಟಿಯಾಗುತ್ತಿದ್ದೇವೆ. ರಾಜ್ಯದಲ್ಲಿ ಎಲ್ಲ ಲಿಂಗಾಯತರು ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಪರವಾಗಿಲ್ಲ, ಅದು ಮುಗಿದುಹೋದ ಅಧ್ಯಾಯ, ತನಗೆ ಯಡಿಯೂರಪ್ಪ ಬಗ್ಗೆ ಗೌರವ ಇತ್ತು, ಅದರೆ ಅವರನ್ನೇ ಜೈಲಿಗೆ ಕಳಿಸಿದ ಮಗನನ್ನು ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮಾಡಿಸಿದ ಬಳಿಕ ಆ ಗೌರವವೆಲ್ಲ ಕೊಚ್ಚಿಕೊಂಡು ಹೋಯಿತು, ಯಡಿಯೂರಪ್ಪನ ಮಗ ವಿಜಯೇಂದ್ರನನ್ನ ರಾಜಾಧ್ಯಕ್ಷ ಮಾಡುವುದಕ್ಕೆ ನಮ್ಮ ವಿರೋಧ ಇದೆ, ಅವರ ಜೋತೆ ಇಬ್ಬರು ಮೂವರು ಪೇಮೆಂಟ್ ಸ್ವಾಮಿಗಳು ಇದ್ದಾರೆ ಅಷ್ಟೇ ಎಂದರು.