ಅಭಿನಯಿಸುತ್ತಲೇ ವೇದಿಕೆ ಮೇಲೆ‌ ಕುಸಿದು ಕಲಾವಿದನ ಸಾವು

0
7

ಬೆಂಗಳೂರು: ಎನ್.ಮುನಿಕೆಂಪಣ್ಣ ಎಂಬ ಕಲಾವಿದ ನಾಟಕದಲ್ಲಿ ಅಭಿನಯಿಸುವಾಗಲೇ ವೇದಿಕೆ ಮೇಲೆ ಕುಸಿದು ಪ್ರಾಣ ಬಿಟ್ಟ ಘಟನೆ ನಡೆದಿದೆ.
ದೇವನಹಳ್ಳಿ ತಾಲೂಕು ಅರದೇಶಹಳ್ಳಿಯ ನಿವಾಸಿಯಾದ ಎನ್.ಮುನಿಕೆಂಪಣ್ಣ ಅವರು ಶುಕ್ರವಾರ ರಾತ್ರಿ ಯಲಹಂಕ ತಾಲೂಕಿನ ಸಾತನೂರು ಬಳಿ ಕುರುಕ್ಷೇತ್ರ ನಾಟಕ ಪ್ರದರ್ಶನದ ವೇಳೆ ನಾಟಕದಲ್ಲಿ ಶಕುನಿಯ ಪಾತ್ರ ನಿರ್ವಹಿಸುತ್ತಿದ್ದ ಮುನಿಕೆಂಪಣ್ಣ ರಾತ್ರಿ 1.30ರ ಸುಮಾರಿಗೆ ಪಾತ್ರದಲ್ಲಿ ಅಭಿನಯಿಸುತ್ತಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಹೃದಯಾಘಾತದಿಂದ ಸಾವನ್ನಪ್ಪಿರುವ ಸಾಧ್ಯತೆ ಇದೆ. ನಿವೃತ್ತ ಉಪನ್ಯಾಸಕರಾಗಿದ್ದ ಎನ್.ಮುನಿಕೆಂಪಣ್ಣ, ದೇನಹಳ್ಳಿಯಲ್ಲಿ 28 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇನ್ನು ಹುಟ್ಟೂರು ಅರದೇಶನಹಳ್ಳಿಯಲ್ಲಿ ಅಂತ್ಯ ಸಂಸ್ಕಾರದಕ್ಕೆ ಸಿದ್ದತೆ ಮಾಡಲಾಗಿಕೊಳ್ಳಲಾಗಿದೆ. ಸದ್ಯ ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

Previous articleಮತಾಂಧ ರಾಕ್ಷಸರನ್ನು ಮಟ್ಟಹಾಕಲು ಅಗ್ರಹ
Next articleಕ್ರೌರ್ಯ ಸರಣೀ ರೂಪದಲ್ಲಿ ಎಗ್ಗಿಲ್ಲದೇ ಸಾಗಿದೆ