ಅನಿಲ ಸೋರಿಕೆಯಿಂದ ಕಾರ್ಮಿಕ ಸಾವು

0
12

ಕೊಪ್ಪಳ: ತಾಲೂಕಿನ ಅಲ್ಲಾನಗರ ಗ್ರಾಮದ ಬಳಿಯ ಕಾಮಿನಿ ಇಸ್ಫಾತ್ ಐರನ್ ಆ್ಯಂಡ್ ಸ್ಪಾಂಜ್ ಕಾರ್ಖಾನೆಯ ಅನಿಲ ಸೋರಿಕೆಯಾಗಿ ಕಾರ್ಮಿಕ ಸಾವನ್ನಪ್ಪಿದ ಘಟನೆ ಮಂಗಳವಾರ ಜರುಗಿದೆ.
ಮೃತರನ್ನು ತಾಲೂಕಿನ ಅಲ್ಲಾನಗರ ಗ್ರಾಮದ ನಿವಾಸಿ ಮಾರುತಿ ಕೊರಗಲ್(24) ಎಂದು ಗುರುತಿಸಲಾಗಿದೆ. ಓರ್ವ ಕಾರ್ಮಿಕ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದು, ಏಳು ಜನರು ಗಾಯಗೊಂಡಿದ್ದಾರೆ. ಗಾಯಾಳು ಕಾರ್ಮಿಕರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಕಾರ್ಬನ್ ಮೋನಾಕ್ಸೈಡ್ ಟ್ಯಾಂಕ್ ಸೋರಿಕೆಯಾಗಿ ಘಟನೆ ಸಂಭವಿಸಿದ್ದು, ಸಾವಿಗೀಡಾದ ಯುವಕನನ್ನು ನಗರದ ಜಿಲ್ಲಾಸ್ಪತ್ರೆಯ ಹಿಂಭಾಗದ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಇರಿಸಲಾಗಿದೆ. ಎಎಸ್ಪಿ ಹೇಮಂತ್ ಕುಮಾರ, ಸಿಪಿಐ ಮೌನೇಶ್ವರ ಪಾಟೀಲ್ ಭೇಟಿ ನೀಡಿ, ಪರಿಶೀಲಿಸಿದರು. ಈ ಕುರಿತು ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಖರ್ಗೆ ಹೇಳಿಕೆಗೆ ಆಕ್ಷೇಪ
Next articleಇಂದು ಅರಿವೇ ಗುರು ಪ್ರಶಸ್ತಿ ಪ್ರದಾನ