ಅಜ್ಜಿಯಾದ ಸುಮಲತಾ ಅಂಬರೀಶ್‌ : ಜೂನಿಯರ್ ಅಂಬಿ ಆಗಮನ

0
11

ಬೆಂಗಳೂರು: ನಟ ಅಭಿಷೇಕ್‌ ಅಂಬರೀಶ್‌ -ಅವಿವಾ ದಂಪತಿಗೆ ಗಂಡು ಮಗು ಜನನವಾಗಿದೆ.
ಇಂದು ಬೆಳಗ್ಗೆ ಗಂಡು ಮಗುವಿಗೆ ಅವಿವಾ ಜನ್ಮ ನೀಡಿದ್ದಾರೆ. ಮಾಜಿ ಸಂಸದೆ ಸುಮಲತಾ ಮೊಮ್ಮಗನನ್ನು ಎತ್ತಿ ಮುದ್ದಾಡಿದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ, ಮಂಗಳವಾರ ಮುಂಜಾನೆ 8:30ರ ಸುಮಾರಿಗೆ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದು. ತಾಯಿ ಮಗು ಇಬ್ಬರೂ ಕೂಡ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ. ಅಭಿಷೇಕ್ ಮತ್ತು ಅವಿವಾ ಅವರ ಮದುವೆಯು ಕಳೆದ ವರ್ಷ ಜೂ.5ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆದಿತ್ತು.

Previous articleಬೆಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳ ಶಾಕ್
Next articleನಿಮ್ಮ ದುರಾಡಳಿತ ಜನತೆಗೆ ತಿಳಿಸಲು ನೀವೇ ಅವಕಾಶ ಮಾಡಿಕೊಟ್ಟಿದ್ದಕ್ಕೆ…….