Home ತಾಜಾ ಸುದ್ದಿ ಹಿರೇಸಿಂಗನಗುತ್ತಿ ಗ್ರಾಮ ಪಂಚಾಯತಿಗೆ ಅಧ್ಯಕ್ಷರಾಗಿ ಆಯ್ಕೆ

ಹಿರೇಸಿಂಗನಗುತ್ತಿ ಗ್ರಾಮ ಪಂಚಾಯತಿಗೆ ಅಧ್ಯಕ್ಷರಾಗಿ ಆಯ್ಕೆ

0
124

ಇಳಕಲ್ : ಅವಿಶ್ವಾಸ ಗೊತ್ತುವಳಿ ಮೂಲಕ ಖಾಲಿಯಾಗಿದ್ದ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಬೆಂಬಲಿತ ಸದಸ್ಯೆ ಶೀಲಾ ಮಲ್ಲಪ್ಪ ಆವಾರಿ ಅಲಂಕರಿಸಿದ್ದಾರೆ.
ಇಂದು ನಡೆದ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಶೀಲಾ ಆವಾರಿ ಆಯ್ಕೆಯಾಗಿದ್ದಾರೆ ಎಂದು ಪಿಡಿಒ ಸಂಗಣ್ಣ ತಿಳಿಸಿದ್ದಾರೆ. ಚುನಾವಣೆಯನ್ನು ಇಳಕಲ್ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಸೋಮಲಿಂಗಪ್ಪ ಅಂಟರದಾನಿ ನಡೆಸಿಕೊಟ್ಟರು ಬೇರಾರು ನಾಮಪತ್ರ ಸಲ್ಲಿಸದ ಕಾರಣ ಶೀಲಾ ಆವಾರಿ ಅವಿರೋಧವಾಗಿ ಆಯ್ಕೆಗೊಂಡರು.
ಈ ಮೊದಲು ಇಲ್ಲಿ ಎಸ್ ಆರ್ ನವಲಿಹಿರೇಮಠ ಫೌಂಡೇಶನ್ ಬೆಂಬಲಿತ ಸದಸ್ಯೆ ಶರಣಮ್ಮ ಮೂಲಿಮನಿ ಅಧ್ಯಕ್ಷರಾಗಿದ್ದರು ಆದರೆ ಅವರನ್ನು ೧೩ ಸದಸ್ಯರು ಸೇರಿಕೊಂಡು ಅವಿಶ್ವಾಸ ಗೊತ್ತುವಳಿ ಮೂಲಕ ಕೆಳಗಿಳಿಸಿದ್ದರು.

ಕಾಶಪ್ಪನವರ ಅಭಿನಂದನೆ : ಶಾಸಕ ವಿಜಯಾನಂದ ಕಾಶಪ್ಪನವರ ನೂತನವಾಗಿ ಆಯ್ಕೆಗೊಂಡ ಶೀಲಾ ಆವಾರಿ ಅವರನ್ನು ಅಭಿನಂದಿಸಿ ಗ್ರಾಮದ ಅಭಿವೃದ್ಧಿಗಾಗಿ ಕಾರ್ಯ ಮಾಡಿ ಎಂದು ಹೇಳಿದರು


ಹರ್ಷ
: ಕಾಂಗ್ರೆಸ್ ಕಾರ್ಯಕರ್ತರು ಗುಲಾಲು ಹಾಕಿಕೊಂಡು ಪಟಾಕಿ ಸಿಡಿಸಿ ಸಂಭ್ರಮಪಟ್ಟರು.