ಹಳೇ ವೈಷಮ್ಯ: ಡಬಲ್ ಮರ್ಡರ್

0
12

ಕಲಬುರಗಿ: ನಗರದಲ್ಲಿ ಹಳೆ ವೈಷಮ್ಯ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಗೈದಿರುವ ದಾರುಣ ಘಟನೆ ನಡೆದಿದೆ.
ನಗರದ ಸೈಯದ್ ಚಿಂಚೋಳಿ ರಸ್ತೆಯಲ್ಲಿ ರೋಹನ ವಾಕಡೆ(22) ಎಂಬಾತ ಕೊಲೆಗೀಡಾದ ಯುವಕ ಎಂದು ಗುರುತಿಸಲಾಗಿದೆ. ಚೌಕ್ ಠಾಣೆ ಪೊಲೀಸ್‌ರು ಭೇಟಿ ನೀಡಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಅದೇ ರೀತಿ ಸಬ್ ಆರ್ಬನ್ ಠಾಣೆ ವ್ಯಾಪ್ತಿಯ ಭೀಮಳ್ಳಿ ಗ್ರಾಮದಲ್ಲಿ ದುಷ್ಕರ್ಮಿಗಳು ಕಟ್ಟಿಗೆಯಿಂದ ಹೊಡೆದು ಭೀಕರವಾಗಿ ಕೊಲೆಗೈದಿದ್ದಾರೆ. ಮಶಾಖ ಮಕ್ಕಸವಾಲೆ(40) ಕೊಲೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಎಂದು ತಿಳಿದು ಬಂದಿದೆ. ಮೃತ ದೇಹ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಕಳುಹಿಸಿಕೊಡಲಾಗಿದೆ. ಈ ಕುರಿತು ಪ್ರತ್ಯೇಕವಾಗಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Previous articleಅಧಿಕಾರವೇ ಇಲ್ಲವಾದರೆ ಆ ಸರ್ಕಾರ ಏಕೆ ಇರಬೇಕು
Next articleಭಾಷಣ ತುಣುಕುಗಳನ್ನು ತೆಗೆದಿದ್ದಕ್ಕೆ ಖರ್ಗೆ ಆಕ್ಷೇಪ