ಸ್ಥಳೀಯರಿಗೆ ಟಿಕೆಟ್ ನೀಡುವಂತೆ ಭಿತ್ತಿಪತ್ರ ಹಿಡಿದು ಪ್ರತಿಭಟನೆ

0
13
ಸ್ಥಳಿಯ

ಬಾಗಲಕೋಟೆ: ಜಿಲ್ಲೆಯ ಬನಹಟ್ಟಿಯಲ್ಲಿ ಮಂಗಳವಾರ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯಲ್ಲಿ ನಾಟಕೀಯ ಬೆಳವಣಿಗೆಯಾಗುವಲ್ಲಿ ಕಾರಣವಾಯಿತು. ಇತ್ತ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಈ ಬಾರಿ ವಿಧಾನಸಭೆ ಚುನಾವಣೆಗೆ ಮತ್ತೇ ಹಾಲಿ ಶಾಸಕ ಸಿದ್ದು ಸವದಿಗೆ ಟಿಕೆಟ್ ನೀಡುವ ಮೂಲಕ ಗೆಲುವು ನಿಶ್ಚಿತವೆಂದು ಸುದ್ದಿಗೋಷ್ಠಿ ಮಾಡುತ್ತಿದ್ದಂತೆ ಮತ್ತೊಂದೆಡೆ ಬನಹಟ್ಟಿಯಲ್ಲಿ ಬೈಕ್ ರ‍್ಯಾಲಿ ನಡೆಯುವ ಸಂದರ್ಭ ಮೆರವಣಿಗೆಯು ಬಸ್ ನಿಲ್ದಾಣ ಬಳಿ ಬರುತ್ತಿದ್ದಂತೆ ಸ್ಥಳೀಯರಿಗೆ, ನೇಕಾರರಿಗೆ ಟಿಕೆಟ್ ನೀಡಬೇಕೆದು ಭಿತ್ತಿಪತ್ರಹಿಡಿದು ಮೆರವಣಿಗೆ ಮುಂದೆ ಪ್ರತಿಭಟನೆ ಪ್ರದರ್ಶನ ನಡೆಯಿತು.
ನೂರಾರು ಕಾರ್ಯಕರ್ತರು ಜಮಾಯಿಸಿ ಫಲಕ ಪ್ರದರ್ಶನ ಮಾಡುವದರೊಂದಿಗೆ ಈ ಭಾರಿ ತೇರದಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸ್ಥಳೀಯರಲ್ಲಿ ಆಯ್ಕೆ ಮಾಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ರಾಜಶೇಖರ ಅಂಬಲಿ, ಡಾ. ಪಂಡಿತ ಪಟ್ಟಣ, ರಾಮಣ್ಣ ಹುಲಕುಂದ, ಬಸವರಾಜ ತೆಗ್ಗಿ, ಸೋಮು ಗೊಂಬಿ, ಪ್ರವೀಣ ಕೋಲಾರ, ರಮೇಶ ಮಂಡಿ, ಕುಮಾರ ಕದಂ, ಅಕ್ಷಯ ಹಟ್ಟಿ ಸೇರಿದಂತೆ ಅನೇಕರಿದ್ದರು.
ಯೂಟರ್ನ್ ಹೊಡೆದ ಬಿಎಸ್‌ವೈ
ರಾಜ್ಯದಲ್ಲಿ ಹಾಲಿ ಶಾಸಕರಲ್ಲಿ 4-5 ಜನರಲ್ಲಿ ಬದಲಾವಣೆ ಮಾಡಲಾಗುವದೆಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರು ಮಂಗಳವಾರ ಬನಹಟ್ಟಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಯೂಟರ್ನ್ ಹೊಡೆದು ಆ ರೀತಿ ಹೇಳಿಕೆ ನೀಡಿಲ್ಲ. ಕೆಲವರಿಗೆ ಸೀಟ್ ಸಿಗದೇಯಿದ್ರನೂ ಆಶ್ಚರ್ಯವಿಲ್ಲ. ಅಂತಿಮವಾಗಿ ಚುನಾವಣಾ ಸಮಿತಿಯ ನಿರ್ಧಾರವೆಂದಿದ್ದೇನೆ ಎಂದರು.

Previous articleಬೈಕ್ ರ‍್ಯಾಲಿ ಸಂದರ್ಭದಲ್ಲಿ ಕಲ್ಲು ತೂರಾಟ
Next articleಲೂಟಿ ಹೊಡೆಯೋದೇ ಬಿಜೆಪಿ ಕೆಲಸ