ಶೆಡ್ಡಿಗೆ ಬೆಂಕಿ ಪ್ರಕರಣ: ಮತ್ತೋರ್ವ ಗಾಯಾಳು ಮೃತ

0
9

ಬಾಗಲಕೋಟೆ:ಮಹಾಲಿಂಗಪುರ ಬಳಿಯ ಬೆಳಗಲಿ ಸರಹದ್ದಿನಲ್ಲಿ ಶೆಡ್ಡಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸುಬಾನ್ ದಸ್ತಗೀರಸಾಬ್ ಪೆಂಡಾರಿ(೨೭) ಮೃತಪಟ್ಟಿದ್ದಾನೆ. ಈ ಮೂಲಕ ಪ್ರಕರಣದಲ್ಲಿ ಸಾವನ್ನಪ್ಪಿರುವವರ ಸಂಖ್ಯರ ೩ಕ್ಕೆ ಏರಿದೆ.
ಜು.೧೫ರ ಮಧ್ಯರಾತ್ರಿ ದುಷ್ಕರ್ಮಿಗಳು ಸುಬಾನ್ ವಾಸಿಸುತ್ತಿದ್ದ ಶೆಡ್ಡಿಗೆ ಬೆಂಕಿ ಹಚ್ಚಿದ್ದರು ಘಟನೆಯಲ್ಲಿ ಸುಬಾನ್ ಸಹೋದರಿ ಹಾಗೂ ತಾಯಿ ಮೃಪಟ್ಟಿದ್ದರು. ಶೇ.೮೦ರಷ್ಟು ಗಾಯಗೊಂಡಿದ್ದ ಸುಬಾನ್ ನನ್ನು ಬೆಳಗಾವಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದ ಆತ ಜು.೧೮ರ ನಸುಕಿನ ಜಾವ ಆತ ಮೃಪಟ್ಟಿದ್ದಾನೆ ಎಂದು ಎಸ್ಪಿ ವೈ.ಅಮರನಾಥ ರೆಡ್ಡಿ ಖಚಿತಪಡಿಸಿದ್ದಾರೆ.

Previous articleಅವೈಜ್ಞಾನಿಕ ಅಭಿವೃದ್ಧಿ-ಪ್ರಕೃತಿಗೆ ನೇಣಿನ ಕುಣಿಕೆ
Next articleವಿಧಾನಮಂಡಲ ಕಲಾಪ: ಇಂದು ಸಿಎಂ ಉತ್ತರ