ರೈತರ ದಿನದಂದು ಕಾಟೇರ ಚಿತ್ರ ತಂಡದಿಂದ ವಿಶೇಷ ಕೊಡುಗೆ

0
21

ಬೆಂಗಳೂರು: ಮಂಡ್ಯ ಬಾಯ್ಸ್ ಕಾಲೇಜ್ ಗ್ರೌಂಡ್‌ನಲ್ಲಿ ನಟ ದರ್ಶನ್‌ ಅಭಿನಯದ ಬಹು ನಿರಿಕ್ಷಿತ ‘ಕಾಟೇರ’ ಚಲನಚಿತ್ರದ ಮತ್ತೊಂದು ಹಾಡು ಬಿಡುಗಡೆ ಆಗಲಿದೆ.
23 ಡಿಸೆಂಬರ್ ರೈತರ ದಿನದಂದು ಈ ಕಾರ್ಯಕ್ರಮ ನಡೆಯಲಿದೆ ಎಂದು ನಟ ದರ್ಶನ್‌ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಹಿತ ಪೋಸ್ಟ್‌ ಮಾಡಿ ಅಭಿಮಾನಿಗಳನ್ನು ಆಮಂತ್ರಿಸಿದ್ದಾರೆ “ರೈತರ ದಿನದಂದು ನಮ್ಮ #ಕಾಟೇರ ಚಿತ್ರದ ಪ್ರೀ-ರಿಲೀಸ್ ಈವೆಂಟ್ ಮಂಡ್ಯದಲ್ಲಿ ನಡೆಯಲಿದೆ! ಈ ವಿಶೇಷ ದಿನದಂದೇ ನಮ್ಮ ಚಿತ್ರದ ರೈತರ ಹಾಡನ್ನು ಬಿಡುಗಡೆಗೊಳಿಸಲಿದ್ದೇವೆ! 😊 ಸ್ಥಳ: ಬಾಯ್ಸ್ ಕಾಲೇಜ್ ಗ್ರೌಂಡ್, ಮಂಡ್ಯ ದಿನಾಂಕ ಮತ್ತು ಸಮಯ: 23 ಡಿಸೆಂಬರ್, ಸಂಜೆ 5ರಿಂದ ಎಲ್ಲಾ ಪ್ರೀತಿಯ ಸೆಲೆಬ್ರಿಟಿಗಳಿಗೆ ನಲ್ಮೆಯ ಸ್ವಾಗತ ಎಂದಿದ್ದಾರೆ.

Previous articleಮಣ್ಣು ಕುಸಿದು-ಕಾರ್ಮಿಕನ ಸಾವು
Next articleI.N.D.I.A ಮೈತ್ರಿಕೂಟಕ್ಕೆ ಕನ್ನಡಿಗ ಪ್ರಧಾನಿ ಅಭ್ಯರ್ಥಿ