ಬೆಂಗಳೂರು : ರಾಜಧಾನಿಯ ಗಿರಿನಗರದಲ್ಲಿರುವ ಶ್ರೀ ಭಂಡಾರ ಕೇರಿ ಮಠದಲ್ಲಿ ವಿಶೇಷ ಜ್ಞಾನ ಸತ್ರ ಇಂದು ಸಂಜೆ ಮತ್ತು ನಾಳೆ (ಜೂ. ೧೧ ಮತ್ತು ೧೨) ನಡೆಯಲಿದೆ.
ಭಾಗವತಶ್ರಮ ಪ್ರತಿಷ್ಠಾನ ಮತ್ತು ಲೋಕ ಸಂಸ್ಕೃತಿ ಕಲಾ ವಿಕಾಸ ಪ್ರತಿಷ್ಠಾನಗಳ ಸಂಯುಕ್ತ ಆಶಯದಲ್ಲಿ ಶ್ರೀ ಭಂಡಾರ ಕೇರಿ ಮಠಾಧೀಶರಾದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ 70ನೇ ವರ್ಧಂತಿ ಮಹೋತ್ಸವದ ಅಂಗವಾಗಿ 70 ಜನ ವಿದ್ವಾಂಸರಿಂದ ವೈವಿಧ್ಯಭರಿತ ಚೇತೋಹಾರಿ ಉಪನ್ಯಾಸ, ಸನ್ಮಾನ, ಶಿಖರೋಪನ್ಯಾಸ ನೆರವೇರಲಿದೆ.
ವಿಚಾರ ವೈಭವ: ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜುಲೈ 11 ರಂದು ಸಂಜೆ 4:30ಕ್ಕೆ ನಡೆಯುವ ವಿಚಾರ ವೈಭವದಲ್ಲಿ ವಿದ್ವಾಂಸರಾದ ಪವಮಾನಾಚಾರ್ಯ, ಪಾಂಡುರಂಗ ಆಚಾರ್ಯ, ಪಾಂಡುರಂಗಿ ಗೋಟೆ, ನರಸಿಂಹಾಚಾರ್ಯ, ಯದುನಂದನ ಆಚಾರ್ಯ ಮತ್ತಿತರರು ಮಾತನಾಡಲಿದ್ದಾರೆ
ವಿಚಾರ ಲಹರಿ: ಜುಲೈ 12ರ ಬೆಳಗ್ಗೆ 9ಕ್ಕೆ ಗೋಷ್ಠಿಯಲ್ಲಿ ಹಿರಿಯ ಪಂಡಿತರಾದ ಜಯತೀರ್ಥಾಚಾರ್ಯ, ವೆಂಕಟೇಶ ಆಚಾರ್ಯ, ಪಡುಬಿದ್ರಿ ಪ್ರವೀಣ ಆಚಾರ್ಯ ತಂತ್ರಿ, ಚತುರ್ವೇದಿ ವೇದವ್ಯಾಸಾಚಾರ್ಯ, ಗುರುರಾಜ ಆಚಾರ್ಯ ಮತ್ತಿತರರು ಧರ್ಮಾಚರಣೆ, ಅಷ್ಟಮಂಗಳ ಶಕುನಗಳು, ಮಹಾಭಾರತ, ಪದ್ಮಪುರಾಣ ಇತ್ಯಾದಿ ವಿಷಯಗಳ ಬಗ್ಗೆ ತಮ್ಮವಿಚಾರ ಮಂಡನೆ ಮಾಡಲಿದ್ದಾರೆ.
ಸಮೀರ- ರಘುರಾಮರ ಶಿಖರೋಪನ್ಯಾಸ: ಶುಕ್ರವಾರ ಸಂಜೆ 4:50ಕ್ಕೆ ವಿನೋದೋತ್ಸವ ಸಮಾರೋಪವು ಭಂಡಾರ ಕೇರಿ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ, ಮುಳಬಾಗಿಲು ಶ್ರೀಪಾದರಾಜರ ಮಠದ ಶ್ರೀ ಸುಜಯ ನಿಧಿ ತೀರ್ಥ ಸ್ವಾಮೀಜಿ ಸಾನಿಧ್ಯದಲ್ಲಿ ಸಂಪನ್ನಗೊಳ್ಳಲಿದೆ.
ವಿಷಯ ತಜ್ಞರಾದ ಸಮೀರ ಕಾಗಲ್ಕರ್ ” ಮಾಧ್ವ ಸಮಾಜದ ಕುಂದು ಕೊರತೆ ಹಾಗೂ ಪರಿಹಾರ ಉಪಾಯಗಳು” ವಿಷಯ ಕುರಿತು ಮಾತನಾಡಲಿದಿದ್ದಾರೆ. ಲೇಖಕ , ಅಂಕಣಕಾರ, ಎ. ಆರ್. ರಘುರಾಮ ಅವರು ” ಮಾಧ್ಯಮವು ಉದ್ಯಮ ಪ್ರಭಾವದಿಂದ ಸಮಾಜವನ್ನು ಅರಳಿಸುವುದರಲ್ಲಿ ಎಡವಿದೆಯೇ” ಎಂಬ ವಿಷಯ ಕುರಿತು ಶಿಖಾರೋಪನ್ಯಾಸ ಮಾಡಲಿದ್ದಾರೆ. ಡಾ. ಶ್ರೀನಿಧಿ ವಾಸಿಷ್ಠ ಅಭಿನಂದನಾ ಭಾಷಣವನ್ನು ಮಾಡದಿದ್ದಾರೆ. ಇದೇ ಸಂದರ್ಭದಲ್ಲಿ 70 ಜನ ವಿದ್ವಾಂಸರಿಗೆ ಸನ್ಮಾನಿಸಲಾಗುವುದು.