ಬೆಂಗಳೂರು: ಮೇಘಾಲಯದ ನೂತನ ರಾಜ್ಯಪಾಲರಾಗಿ ಮೈಸೂರಿನ ಮಾಜಿ ಸಂಸದ, ಮಾಜಿ ಸಚಿವ, ಮಾಜಿ ಎಂಎಲ್ಸಿ ಆಗಿ ಸೇವೆ ಸಲ್ಲಿಸಿರುವ ವಿಜಯ್ ಶಂಕರ್ ಆಯ್ಕೆ ಆಗಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೇಘಾಲಯದ ರಾಜ್ಯಪಾಲರನ್ನಾಗಿ ನೇಮಿಸಿದ್ದಾರೆ. ರಾಜಸ್ಥಾನ, ತೆಲಂಗಾಣ, ಪಂಜಾಬ್ ಸೇರಿದಂತೆ 10 ರಾಜ್ಯಗಳಿಗೆ ರಾಜ್ಯಪಾಲರನ್ನು ಅವರನ್ನ ನೇಮಕ ಮಾಡಲಾಗಿದೆ. 1956 ಅಕ್ಟೋಬರ್ 21ರಂದು ಜನಿಸಿದ ವಿಜಯ್ ಶಂಕರ್ ಆರಂಭದ ದಿನಗಳಿಂದ ಬಿಜೆಪಿಯಲ್ಲಿದ್ದ ಇವರು, 2017ರಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. 2019ರಲ್ಲಿ ಮತ್ತೆ ಬಿಜೆಪಿಗೆ ಸೇರಿಕೊಂಡಿದ್ದರು.